ETV Bharat / sports

ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿರುವ ಪಾಕಿಸ್ತಾನ: ಕೋವಿಡ್​ ಟೆಸ್ಟ್​​ ಕಡ್ಡಾಯ ಎಂದ ಇಸಿಬಿ - ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್​ ತಂಡ ಜೂನ್​ 28 ರಂದು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದ್ದು, ಜುಲೈ 13 ರಂದು ಡರ್ಬಿಶೈರ್‌ನ ಇಂಕೊರಾ ಕೌಂಟಿ ಮೈದಾನಕ್ಕೆ ಬರುವ ಮೊದಲು ವೋರ್ಸೆಸ್ಟರ್‌ನ ಬ್ಲ್ಯಾಕ್‌ಫಿಂಚ್ ನ್ಯೂ ರೋಡ್​ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲಿದೆ ಎಂದು ತಿಳಿದು ಬಂದಿದೆ.

Pakistan cricket team to arrive in UK
ಇಂಗ್ಲೆಂಡ್​ ಪ್ರವಾಸ ತೆರಳಲಿರುವ ಪಾಕಿಸ್ತಾನ
author img

By

Published : Jun 27, 2020, 9:04 AM IST

ಲಂಡನ್​ : ಮುಂಬರುವ ಕ್ರಿಕೆಟ್​ ಸರಣಿಗಾಗಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡ ಭಾನುವಾರ ಯುನೈಟೆಡ್ ಇಂಗ್ಲೆಂಡ್​​ಗೆ ಆಗಮಿಸಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ದ ಮೂರು ಟೆಸ್ಟ್ ಮತ್ತು ಟಿ -20 ಪಂದ್ಯಗಳನ್ನು ಆಡಲಿದೆ.

ಇಂಗ್ಲೆಂಡ್​ ವಿರುದ್ದ ಮೂರು ಟೆಸ್ಟ್ ಮತ್ತು ಮೂರು ಐಟಿ - 20 ಪಂದ್ಯಗಳಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡ ಜೂನ್ 28 ರ ಭಾನುವಾರ ಇಂಗ್ಗೆಂಡ್​​​​ಗೆ ಆಗಮಿಸಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಪಾಕ್​ ತಂಡ ಆಗಮಿಸಿದ ನಂತರ ವೇಳಾಪಟ್ಟಿಯನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಇಸಿಬಿ ತಿಳಿಸಿದೆ.

Pakistan cricket team to arrive in UK
ಇಂಗ್ಲೆಂಡ್​ ಪ್ರವಾಸ ತೆರಳಲಿರುವ ಪಾಕಿಸ್ತಾನ

ಪಾಕಿಸ್ತಾನ ಕ್ರಿಕೆಟ್ ತಂಡವು ಜುಲೈ 13 ರಂದು ಡರ್ಬಿಶೈರ್‌ನ ಇಂಕೊರಾ ಕೌಂಟಿ ಮೈದಾನಕ್ಕೆ ಬರುವ ಮೊದಲು ವೋರ್ಸೆಸ್ಟರ್‌ನ ಬ್ಲ್ಯಾಕ್‌ಫಿಂಚ್ ನ್ಯೂ ರೋಡ್​ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲಿದೆ ಎಂದು ತಿಳಿದು ಬಂದಿದೆ.

ಪ್ರವಾಸದ ಎಲ್ಲ ಸದಸ್ಯರನ್ನು ಪ್ರಯಾಣದ ಮೊದಲು ಕೋವಿಡ್​ ಟೆಸ್ಟ್​​ಗೆ​ ಒಳಪಡಿಸಲಾಗುವುದು. ಪಾಸಿಟಿವ್​ ಬಂದವರಿಗೆ ಭಾನುವಾರ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​​​ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.