ETV Bharat / sports

ದಕ್ಷಿಣ ಆಫ್ರಿಕಾ - ಪಾಕ್ ಟಿ20 ಸರಣಿ: ಕ್ಲಾಸೆನ್ ಹೆಗಲಿಗೆ ನಾಯಕತ್ವ ಜವಾಬ್ದಾರಿ

ಪಾಕಿಸ್ತಾನದ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹೆನ್ರಿಚ್ ಕ್ಲಾಸೆನ್ ಮನ್ನಡೆಸಲಿದ್ದಾರೆ.

author img

By

Published : Jan 20, 2021, 11:01 AM IST

Henrich Klaasen to lead Proteas in T20I series
ಹೆನ್ರಿಚ್ ಕ್ಲಾಸೆನ್

ಜೋಹಾನ್ಸ್‌ಬರ್ಗ್: 2021 ಫೆಬ್ರವರಿ 11 ರಿಂದ 14 ವರೆಗೆ ಲಾಹೋರ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಹೆನ್ರಿಚ್ ಕ್ಲಾಸೆನ್ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತಿಳಿಸಿದೆ.

ಕ್ಲಾಸೆನ್ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ. ಕ್ವಿಂಟನ್ ಡಿ ಕಾಕ್ ನೇತೃತ್ವದ ಟೆಸ್ಟ್ ತಂಡವು ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿದ್ದು, ಕೋವಿಡ್ 19 ಪ್ರೋಟೊಕಾಲ್​ಗಳಿಗೆ ಅನುಗುಣವಾಗಿ ಕ್ವಾರಂಟೈನ್ ನಿಯಮವನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ ಕ್ಲಾಸೆನ್ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

"ಪ್ರವಾಸೋದ್ಯಮಗಳು ಮತ್ತು ಕ್ರೀಡಾಕೂಟಗಳು ಯೋಜಿತ ರೀತಿಯಲ್ಲಿ ಅಥವಾ ಸಾಧ್ಯವಾದಷ್ಟು ಪರಿಷ್ಕೃತ ಯೋಜನೆಗಳಿಗೆ ಕೋವಿಡ್ ಸಾಂಕ್ರಾಮಿಕ ಅಡ್ಡಿಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುವತ್ತ ಕ್ರೀಡಾ ಸಂಸ್ಥೆಗಳು ಗಮನಹರಿಸಿವೆ. ಪಾಕಿಸ್ತಾನದಲ್ಲಿ ಸ್ಪರ್ಧಿಸಲು ಅತ್ಯತ್ತಮ ಟಿ-20 ತಂಡ ಮತ್ತು ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಚಿಂತನೆ ನಡೆಸುತ್ತೇವೆ "ಎಂದು ಸಿಎಸ್ಎ ನಿರ್ದೇಶಕ ಗ್ರೇಮ್ ಸ್ಮಿತ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ಪ್ರವಾಸಗಳಿಗೆ ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಯನ್ನು ಹೇಗೆ ನಿರ್ವಹಿಸಲಾಗುವುದು ಎಂಬ ಯೋಜನೆಗಳನ್ನು ಮುಕ್ತಾಯಗೊಳಿಸುವ ಹಂತದಲ್ಲಿದ್ದೇವೆ. ಆ ವಿವರಗಳನ್ನು ಅಂತಿಮಗೊಳಿಸಿದಾಗ ಹಂಚಿಕೊಳ್ಳುತ್ತೇವೆ. ಇದು ಕೆಲವು ಕ್ರಿಕೆಟ್ ರಾಷ್ಟ್ರಗಳು ಹೊಂದಿರುವ ಕ್ರಮಗಳ ಉದಾಹರಣೆಯಾಗಿದೆ. ಕೋವಿಡ್-19 ಪ್ರೋಟೋಕಾಲ್ ಪೂರೈಸುವಾಗ ಮೂರು ಅಥವಾ ನಾಲ್ಕು ತಿಂಗಳ ಅವಧಿಯಲ್ಲಿ ಅವರು ಒಂದಕ್ಕಿಂತ ಹೆಚ್ಚು ಪ್ರವಾಸಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಆಟಗಾರ ನಿವೃತ್ತಿಯಿಂದ ದಕ್ಷಿಣ ಆಫ್ರಿಕಾ ತಂಡದ ಪುನರ್​ ರ್ನಿರ್ಮಾಣ ಮುಂದುವರಿಸುವುದರಿಂದ ಟಿ-20 ತಂಡವು ಹಲವಾರು ಹೊಸ ಮುಖಗಳನ್ನು ಹೊಂದಿದೆ. 2021 ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಹೊಸ ಆಯ್ಕೆಗಳನ್ನು ಕಂಡುಕೊಳ್ಳುಲು ರಾಷ್ಟ್ರೀಯ ಆಯ್ಕೆ ಸಮಿತಿಗೆ ಇದು ಉತ್ತಮ ಸಮಯವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.