ಇಸ್ಲಾಮಾಬಾದ್: ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಕೆಲ ಪ್ಲೇಯರ್ಸ್ ಅವರೊಂದಿಗೆ ಅನುಚಿತವಾಗಿ ವರ್ತನೆ ಮಾಡ್ತಿದ್ದರು ಎಂಬ ಶೊಯೇಬ್ ಹೇಳಿಕೆ ನಿಜ ಎಂದು ಖುದ್ದಾಗಿ ಕನೇರಿಯಾ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಪ್ರತಿನಿಧಿಸಿದ್ದ ಎರಡನೇ ಹಿಂದೂ ಆಟಗಾರ ಎಂಬ ಹೆಗ್ಗಳಿಕೆ ಕನೇರಿಯಾ ಅವರದ್ದಾಗಿದ್ದು, ಅದೇ ಕಾರಣಕ್ಕೆ ಅವರನ್ನ ತಂಡದಿಂದ ದೂರ ಇಡಲಾಗಿತ್ತು. ಅವರ ಜೊತೆಗೆ ಒಟ್ಟಿಗೆ ಕುಳಿತು ಯಾವುದೇ ಪ್ಲೇಯರ್ಸ್ ಊಟ ಮಾಡ್ತಿರಲಿಲ್ಲ.
-
Pak cricketer Danish Kaneria to ANI on Shoaib Akhtar's allegations that Pak players had problems eating with Kaneria as he's a Hindu:He told the truth. I'll reveal names of players who didn't like to talk to me as I was a Hindu. Didn't have courage to speak on it, but now I will. pic.twitter.com/HmeSUhtbUk
— ANI (@ANI) December 26, 2019 " class="align-text-top noRightClick twitterSection" data="
">Pak cricketer Danish Kaneria to ANI on Shoaib Akhtar's allegations that Pak players had problems eating with Kaneria as he's a Hindu:He told the truth. I'll reveal names of players who didn't like to talk to me as I was a Hindu. Didn't have courage to speak on it, but now I will. pic.twitter.com/HmeSUhtbUk
— ANI (@ANI) December 26, 2019Pak cricketer Danish Kaneria to ANI on Shoaib Akhtar's allegations that Pak players had problems eating with Kaneria as he's a Hindu:He told the truth. I'll reveal names of players who didn't like to talk to me as I was a Hindu. Didn't have courage to speak on it, but now I will. pic.twitter.com/HmeSUhtbUk
— ANI (@ANI) December 26, 2019
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಪ್ರತಿಕ್ರಿಯೆ ನೀಡಿರುವ ಕನೇರಿಯಾ, ಹೌದು ಶೊಯೇಬ್ ಅಖ್ತರ್ ಹೇಳಿರುವುದು ಸತ್ಯ. ನಾನು ಹಿಂದೂ ಎಂಬ ಕಾರಣಕ್ಕಾಗಿ ಯಾರೂ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಅವರ ಹೆಸರು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲಿದ್ದೇನೆ ಎಂದಿದ್ದಾರೆ. ಈ ಹಿಂದೆ ನಾನು ಹೆಸರು ಬಹಿರಂಗ ಪಡಿಸುವಷ್ಟು ಧೈರ್ಯ ಹೊಂದಿರಲಿಲ್ಲ. ಆದರೆ ಇದೀಗ ನಾನು ಅದಕ್ಕೆ ಹೆದರುವುದಿಲ್ಲ ಎಂದಿದ್ದಾರೆ.