ETV Bharat / sports

ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ 'ದಾವಣಗೆರೆ ಎಕ್ಸ್​ಪ್ರೆಸ್​' ವಿನಯ್​ ಕುಮಾರ್​! - ದಾವಣಗೆರೆ ಎಕ್ಸ್​ಪ್ರೆಸ್​ ವಿನಯ್​ ಕುಮಾರ್​

ಕರ್ನಾಟಕದ ಪ್ರತಿಭಾನ್ವಿತ ವೇಗದ ಬೌಲರ್​ ವಿನಯ್ ಕುಮಾರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದಾರೆ.

Pacer Vinay Kumar
Pacer Vinay Kumar
author img

By

Published : Feb 26, 2021, 4:09 PM IST

ಬೆಂಗಳೂರು: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚು ಹರಿಸಿದ್ದ ದಾವಣಗೆರೆ ಎಕ್ಸ್​ಪ್ರೆಸ್ ವಿನಯ್ ಕುಮಾರ್​ ಎಲ್ಲಾ ಮಾದರಿಯ ಕ್ರಿಕೆಟ್​​​ಗೆ ವಿದಾಯ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್​ನಲ್ಲಿ ಆಡಿರುವ ವಿನಯ್​ ಕುಮಾರ್,​ ಒಂದು ಟೆಸ್ಟ್​, 31 ಏಕದಿನ ಪಂದ್ಯ ಹಾಗೂ 9 ಟಿ-20 ಕ್ರಿಕೆಟ್​ ಪಂದ್ಯ ಆಡಿದ್ದು, 49 ವಿಕೆಟ್​ ಪಡೆದುಕೊಂಡಿದ್ದಾರೆ.

ದಾವಣಗೆರೆ ಎಕ್ಸ್​ಪ್ರೆಸ್​ ಎಂದೇ ಖ್ಯಾತಿ ಪಡೆದಿರುವ ವಿನಯ್ ಕುಮಾರ್​​​, ಸಚಿನ್ ತೆಂಡೂಲ್ಕರ್​, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್​ ಕೊಹ್ಲಿ ಜತೆ ಆಡಿರುವುದು ತಮ್ಮ ಪುಣ್ಯ ಎಂದಿದ್ದಾರೆ. ಜತೆಗೆ ಅನಿಲ್ ಕುಂಬ್ಳೆ, ರಾಹುಲ್​ ದ್ರಾವಿಡ್​, ಧೋನಿ, ವಿರೇಂದ್ರ ಸೆಹ್ವಾಗ್​, ಗೌತಮ್​ ಗಂಭೀರ್​, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ರೋಹಿತ್​ ಶರ್ಮಾ ಅವರೊಂದಿಗೂ ಮೈದಾನ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ಸಚಿನ್​ ತೆಂಡೂಲ್ಕರ್​ ತಂಡದ ಮೆಂಟರ್ ಆಗಿದ್ದರು.

ಇದನ್ನೂ ಓದಿ: ಪಿಚ್​ ಬ್ಯಾಟಿಂಗ್​ ಮಾಡಲು ಚೆನ್ನಾಗಿತ್ತು, ಅಲ್ಲಿ ರಾಕ್ಷಸತನ ಇರಲಿಲ್ಲ: ಟೀಕಾಕಾರರಿಗೆ ರೋಹಿತ್ ಟಾಂಗ್​

2011ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 30 ರನ್​ ನೀಡಿ 4 ವಿಕೆಟ್ ಪಡೆದುಕೊಂಡಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. ವಿನಯ್ ಕುಮಾರ್​ 2004-2005ರಲ್ಲಿ ಕರ್ನಾಟಕ ತಂಡದ ರಣಜಿ ಮೂಲಕ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, 2007-08ರಲ್ಲಿ ರಣಜಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ಆಗಿ ಹೊರಹೊಮ್ಮಿದ್ದಾರೆ. ಈ ಪ್ರದರ್ಶನದಿಂದಾಗಿ 2009-10ರ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.