ETV Bharat / sports

ಟಿ20 ಕ್ರಿಕೆಟ್​ನಲ್ಲಿ ಮೊದಲ ಶತಕಗಳಿಸಿದ್ದು ವೃತ್ತಿ ಜೀವನದ ಶ್ರೇಷ್ಠ ಸಾಧನೆ: ರೈನಾ

ಮೇ 2, 2010ರಲ್ಲಿ ಸುರೇಶ್​ ರೈನಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಶತಕ ಸಿಡಿಸಿದ್ದರು. ಭಾರತದ ಚುಟುಕು ಕದನದ ಇತಿಹಾಸದಲ್ಲಿ ದಾಖಲಾಗಿದ್ದ ಚೊಚ್ಚಲ ಶತಕಕ್ಕೀಗ 10 ವರ್ಷ ತುಂಬಿದೆ.

author img

By

Published : May 3, 2020, 11:29 AM IST

ಸುರೇಶ್​ ರೈನಾ
ಸುರೇಶ್​ ರೈನಾ

ಮುಂಬೈ: ಪವರ್​ ಹಿಟ್ಟರ್​ ಖ್ಯಾತಿಯ ಸುರೇಶ್​ ರೈನಾ ದಶಕದ ಹಿಂದೆ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಈ ಸ್ಮರಣೀಯ ಸಂದರ್ಭವನ್ನು ನೆನಪಿಸಿಕೊಂಡಿರುವ ಅವರು ಅದು ನನ್ನ ವೃತ್ತಿ ಜೀವನದ ಅತ್ಯಂತ ಮಧುರ ಕ್ಷಣ ಎಂದಿದ್ದಾರೆ.

  • One of the most memorable moments for me. Scoring a first ever T20i century for my country undoubtedly filled me with a lot of confidence, energy & a never ending zest of giving my 100% to my game every time I’m on the field. pic.twitter.com/1b7MdthbIP

    — Suresh Raina🇮🇳 (@ImRaina) May 2, 2020 " class="align-text-top noRightClick twitterSection" data=" ">

ದೇಶದ ಪರ ಮೊದಲ ಶತಕ ಸಿಡಿಸಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಮತ್ತು ಅದೊಂದು ಸ್ಮರಣೀಯ ಕ್ಷಣ. ಈ ಶತಕ ನನಗೆ ಮೈದಾನದಲ್ಲಿ ಹೋರಾಡಲು ಶಕ್ತಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಆ ಪಂದ್ಯದಲ್ಲಿ ರೈನಾ ಶತಕದ ನೆರವಿನಿಂದ ಭಾರತ ತಂಡ 186 ರನ್ ​ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 172 ರನ್​ಗಳಿಸಲಷ್ಟೇ ಶಕ್ತವಾಗಿ 14 ರನ್​ಗಳ ಸೋಲನುಭವಿಸಿತ್ತು.

ಕೊರೊನಾ ನಿಧಿಗೆ ರೈನಾ ದೇಣಿಗೆ:

ಇನ್ನು ದೇಶವೇ ಕೊರೊನಾ ಲಾಕ್​ಡೌನ್​ ಸಂಕಷ್ಟಕ್ಕೆ ಸಿಲುಕಿದೆ. ಸುರೇಶ್​ ರೈನಾ ಕೊರೊನಾ ಪರಿಹಾರ ಕಾರ್ಯಗಳಿಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ 20 ಹಾಗೂ ಕೇಂದ್ರ ಸರ್ಕಾರಕ್ಕೆ 31 ಲಕ್ಷ ರೂ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.