ಮುಂಬೈ: ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ 20 ವರ್ಷಗಳ ಹಿಂದೆ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
ಇಂದೋರ್ನ ನೆಹರೂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. 259ನೇ ಇನ್ನಿಂಗ್ಸ್ನಲ್ಲಿ 10 ಸಾವಿರ ರನ್‌ಗಳನ್ನು ಅವರು ಪೂರೈಸಿದ್ದರು. ಆ ಪಂದ್ಯದಲ್ಲಿ ಸಚಿನ್ 139 ರನ್ಗಳಿಸಿ ಭಾರತ 289ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
300 ರನ್ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಅಜಿತ್ ಅಗರ್ಕರ್ ಮತ್ತು ಹರ್ಭಜನ್ ಸಿಂಗ್ ದಾಳಿಗೆ ಸಿಲುಕಿ 181 ರನ್ಗಳಿಗೆ ಆಲೌಟ್ ಆಗಿತ್ತು. ಭಾರತ 118ರನ್ಗಳಿಂದ ಗೆಲುವು ಸಾಧಿಸಿತ್ತು.
-
#OnThisDay 20 years ago, Sachin Tendulkar became the first cricketer to cross 10,000 ODI runs.
— Wisden India (@WisdenIndia) March 31, 2021 " class="align-text-top noRightClick twitterSection" data="
He achieved the feat in 259 innings, a record that was broken by Virat Kohli in 2018. pic.twitter.com/gw4hBTqqF6
">#OnThisDay 20 years ago, Sachin Tendulkar became the first cricketer to cross 10,000 ODI runs.
— Wisden India (@WisdenIndia) March 31, 2021
He achieved the feat in 259 innings, a record that was broken by Virat Kohli in 2018. pic.twitter.com/gw4hBTqqF6#OnThisDay 20 years ago, Sachin Tendulkar became the first cricketer to cross 10,000 ODI runs.
— Wisden India (@WisdenIndia) March 31, 2021
He achieved the feat in 259 innings, a record that was broken by Virat Kohli in 2018. pic.twitter.com/gw4hBTqqF6
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34,357 ರನ್ಗಳಿಸಿದ್ದು, 2ನೇ ಸ್ಥಾನದಲ್ಲಿರುವ ಕುಮಾರ್ ಸಂಗಕ್ಕಾರಗಿಂತ 6,000 ಕ್ಕೂ ಹೆಚ್ಚು ರನ್ ಮುಂದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಏಕದಿನ ಕ್ರಿಕೆಟ್‌ನಲ್ಲಿ 18,246 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 15921 ರನ್ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 51 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿರುವ ಏಕೈಕ ಬ್ಯಾಟ್ಸ್ಮನ್ ಆಗಿದ್ದಾರೆ.
ಇದನ್ನೂ ಓದಿ: ಏಕದಿನ ಬೌಲಿಂಗ್ ರ್‍ಯಾಂಕ್: ಬುಮ್ರಾ ಹಿಂದಿಕ್ಕಿದ ಹೆನ್ರಿ, 11ನೇ ರ್ಯಾಂಕ್ಗೆ ಬಡ್ತಿ ಪಡೆದ ಭುವಿ