ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ಪರವಾಗಿ ಗ್ಲೆನ್ ಫಿಲಿಪ್ಸ್ ಅವರ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಗ್ಲೆನ್ ಫಿಲಿಪ್ಸ್ 51 ಎಸೆತಗಳ ಇನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 108 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದ್ರು. ಫಿಲಿಪ್ಸ್ ಭರ್ಜರಿ ಶತಕದ ನೆರವಿನಿಂದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 238 ರನ್ ಪೇರಿಸಿತು.
-
A maiden T20I century for Glenn Phillips 💯
— ICC (@ICC) November 29, 2020 " class="align-text-top noRightClick twitterSection" data="
A knock of utmost quality, featuring nine fours and eight sixes 💥#NZvWI pic.twitter.com/2jdA2Pw1Ih
">A maiden T20I century for Glenn Phillips 💯
— ICC (@ICC) November 29, 2020
A knock of utmost quality, featuring nine fours and eight sixes 💥#NZvWI pic.twitter.com/2jdA2Pw1IhA maiden T20I century for Glenn Phillips 💯
— ICC (@ICC) November 29, 2020
A knock of utmost quality, featuring nine fours and eight sixes 💥#NZvWI pic.twitter.com/2jdA2Pw1Ih
ಕಠಿಣ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 166 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಹಿಂದೆ ಕಾಲಿನ್ ಮುನ್ರೊ ವೆಸ್ಟ್‌ಇಂಡೀಸ್ ವಿರುದ್ಧ 47 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಆದರೆ, ಇಂದು ಫಿಲಿಪ್ಸ್ 46 ಎಸೆತಗಳಲ್ಲಿ ಶತಕ ಪೂರೈಸಿ, ನ್ಯೂಜಿಲ್ಯಾಂಡ್ ಪರ ವೇಗದ ಶತಕ ದಾಖಲಿಸಿದ್ರು.