ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಮತ್ತಷ್ಟು ಹತ್ತಿರವಾದ ಕಿವೀಸ್​! - ಭಾರತ

ಪಾಕಿಸ್ತಾನ ವಿರುದ್ಧ 2-0 ಯಲ್ಲಿ ಸರಣಿ ಗೆದ್ದ ಬ್ಲಾಕ್​ ಕ್ಯಾಪ್ಸ್ 120 ಟೆಸ್ಟ್​ ಚಾಂಪಿಯನ್​ಶಿಪ್​ ಪಾಯಿಂಟ್​ ಅಂಕ ಗಳಿಸಿಕೊಂಡಿದೆ. ಪಾಯಿಂಟ್​ನಲ್ಲಿ ಗರಿಷ್ಠವಾಗಿದ್ದರೂ ಗೆಲುವಿನ ಸರಾಸರಿಯಲ್ಲಿ ಶೇ 70ರಷ್ಟು ಇದ್ದು 3ನೇ ಸ್ಥಾನದಲ್ಲಿದೆ.

ನ್ಯೂಜಿಲ್ಯಾಂಡ್​ ತಂಡ
ನ್ಯೂಜಿಲ್ಯಾಂಡ್​ ತಂಡ
author img

By

Published : Jan 6, 2021, 4:47 PM IST

ಕ್ರೈಸ್ಟ್​ಚರ್ಚ್​: ಸತತ 3ನೇ ತವರಿನ ಟೆಸ್ಟ್​ ಸರಣಿ ಗೆದ್ದ ನ್ಯೂಜಿಲ್ಯಾಂಡ್​ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ಗೆ ಅರ್ಹತೆ ಪಡೆಯುವತ್ತ ಮತ್ತಷ್ಟು ಹತ್ತಿರ ಬಂದಿದೆ.

ಪಾಕಿಸ್ತಾನ ವಿರುದ್ಧ 2-0ಯಲ್ಲಿ ಸರಣಿ ಗೆದ್ದ ಬ್ಲಾಕ್​ ಕ್ಯಾಪ್ಸ್ 420 ಟೆಸ್ಟ್​ ಚಾಂಪಿಯನ್​ಶಿಪ್​ ಪಾಯಿಂಟ್​ ಅಂಕಗಳಿಸಿಕೊಂಡಿದೆ. ಪಾಯಿಂಟ್​ನಲ್ಲಿ ಗರಿಷ್ಠವಾಗಿದ್ದರೂ ಸರಾಸರಿ ಅಂಕ ಪಟ್ಟಿಯಲ್ಲಿ 70 ಅಂಕಗಳನ್ನು ಹೊಂದಿದ್ದು 3ನೇ ಸ್ಥಾನದಲ್ಲಿದೆ.

76.6 ಸರಾಸರಿ ಅಂಕ ಹೊಂದಿರುವ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದ್ದರೆ, ಭಾರತ 72.2 ಸರಾಸರಿ ಅಂಕಗಳೊಂದಿದೆ 2ನೇ ಸ್ಥಾನದಲ್ಲಿದೆ. ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಪಂದ್ಯಗಳು ಪ್ರಮುಖವಾಗಿದ್ದು, ಗೆಲ್ಲದಿದ್ದರೂ ಡ್ರಾ ಸಾಧಿಸಲಾದರೂ ಪ್ರಯತ್ನಿಸಬೇಕಾಗುವ ಅನಿವಾರ್ಯತೆ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿದರೆ ಭಾರತ ಫೈನಲ್​ ಪ್ರವೇಶಿಸುವ ಕನಸು ಮತ್ತಷ್ಟು ಬಲಿಷ್ಠವಾಗಲಿದೆ. ಏಕೆಂದರೆ ಮುಂದಿನ ಸರಣಿ ಇಂಗ್ಲೆಂಡ್​ ವಿರುದ್ಧ ಭಾರತದಲ್ಲೇ ನಡೆಯಲಿದೆ.

  • New Zealand are in the race for the #WTC21 final 👀

    They have gained crucial points to strengthen their position in the ICC World Test Championship standings 💪 pic.twitter.com/MXg76iJ5Qq

    — ICC (@ICC) January 6, 2021 " class="align-text-top noRightClick twitterSection" data=" ">

ಇಂಗ್ಲೆಂಡ್​ ತಂಡಕ್ಕೂ ಕೂಡ ಇನ್ನು 2 ಸರಣಿ ಬಾಕಿಯುಳಿದಿದೆ. ಆದರೆ ಕೇವಲ 60.8 ಸರಾಸರಿ ಅಂಕ ಹೊಂದಿರುವುದರಿಂದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸುವುದು ಕಷ್ಟಸಾಧ್ಯವಾಗಿದೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಬಾರಿಗೆ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ನ್ಯೂಜಿಲ್ಯಾಂಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.