ETV Bharat / sports

ಧೋನಿಗಿಂತಲೂ ರೋಹಿತ್​ ಚಾಣಾಕ್ಷ ನಾಯಕ: 'ಬಂಗಾರ'ದಂಥ ಮಾತು ಪುನರುಚ್ಚರಿಸಿದ ಮಾಜಿ ಕೋಚ್​ - ಸಂಜಯ್​ ಮಂಜ್ರೇಕರ್

ಇದೀಗ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ಕೂಲ್​ ಕ್ಯಾಪ್ಟನ್​ ಎಂಎಸ್​ ಧೋನಿಗಿಂತಲೂ ರೋಹಿತ್​ ಶರ್ಮಾ ಐಪಿಎಲ್​ನ ಶ್ರೇಷ್ಠ ನಾಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಧೋನಿಗಿಂತಲೂ ರೋಹಿತ್​ ಚಾಣಾಕ್ಷ ನಾಯಕ
ಧೋನಿಗಿಂತಲೂ ರೋಹಿತ್​ ಚಾಣಾಕ್ಷ ನಾಯಕ
author img

By

Published : Apr 21, 2020, 2:23 PM IST

ಮುಂಬೈ: ಸ್ಟಾರ್​ಸ್ಪೋರ್ಟ್ಸ್​ ಜ್ಯೂರಿ ತಂಡ ಇತ್ತೀಚೆಗೆ ಐಪಿಎಲ್​ನ ಶ್ರೇಷ್ಠ ನಾಯಕರನ್ನಾಗಿ ರೋಹಿತ್ ಶರ್ಮಾ-ಎಂಎಸ್​ ಧೋನಿಯನ್ನು ಆಯ್ಕೆ ಮಾಡಿತ್ತು.

ಆ ಜ್ಯೂರಿ ತಂಡದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್,​ ರೋಹಿತ್​ ಶರ್ಮಾ ಶ್ರೇಷ್ಠ ಐಪಿಎಲ್​ ನಾಯಕ ಎಂದು ತಿಳಿಸಿದ್ದರು. ಅಲ್ಲದೆ ಮುಂದಿನ ದಿನಗಳಲ್ಲಿ ರೋಹಿತ್​ ತಮ್ಮ ಶ್ರೇಷ್ಠ ನಾಯಕತ್ವವನ್ನು ಮುಂದುವರಿಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದರು.

ಇದೀಗ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ಕೂಲ್​ ಕ್ಯಾಪ್ಟನ್​ ಎಂಎಸ್​ ಧೋನಿಗಿಂತಲೂ ರೋಹಿತ್​ ಶರ್ಮಾ ಐಪಿಎಲ್​ನ ಶ್ರೇಷ್ಠ ನಾಯಕ ಎಂದಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲಿ ರೋಹಿತ್, ಧೋನಿಗಿಂತಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದ್ದರಿಂದಲೇ ಅವರ ನೇತೃತ್ವದ ತಂಡ ಈಗಾಗಲೆ 4 ಬಾರಿ ಟ್ರೋಫಿ ಎತ್ತಿ ಹಿಡಿದಿದೆ ಎಂದು ಸಂಜಯ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ನಿರ್ಧಾರ ಕೇವಲ ಐಪಿಎಲ್​ಗೆ ಮಾತ್ರ ಸೀಮಿತವಾಗಿದೆ.

ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 3 ಬಾರಿ ಚಾಂಪಿಯನ್​ ಪಟ್ಟಕ್ಕೇರಿದ್ದರೆ, 5 ಬಾರಿ ರನ್ನರ್​ ಆಪ್ ಆಗಿದೆ. ಇನ್ನು ಆಡಿರುವ 10 ಆವೃತ್ತಿಗಳಲ್ಲಿ ಪ್ಲೇ ಆಫ್​ ಹಂತಕ್ಕೇರಿಸಿರುವುದು ಧೋನಿ ನಾಯಕತ್ವದ ಹೈಲೈಟ್ಸ್​ ಆಗಿದೆ.

ಇನ್ನು ರೋಹಿತ್​ ಶರ್ಮಾ ಮುಂಬೈ ಪರ 7 ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ಇವರಿಬ್ಬರನ್ನು ಐಪಿಎಲ್​ನ ಶ್ರೇಷ್ಠ ನಾಯಕರೆಂದು ತೀರ್ಮಾನಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.