ಮೆಲ್ಬೋರ್ನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ತಂಡ ಸೇರಿರುವ ಸ್ಮಿತ್ಗೆ ಮರಳಿ ನಾಯಕತ್ವ ನೀಡುವ ಆಲೋಚನೆ ಇಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಚೇರ್ಮನ್ ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆ್ಯಶಸ್ನಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್ನಲ್ಲಿ ಗೆದ್ದು ಬೀಗಿದೆ. ಮಾಜಿ ನಾಯಕ ಸ್ಟಿವ್ ಸ್ಮಿತ್ ಎರಡೂ ಇನ್ನಿಂಗ್ಸ್ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 144 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 142 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
![Tim pane](https://etvbharatimages.akamaized.net/etvbharat/prod-images/ebi1jj6xkauthib_1008newsroom_1565403517_577.jpg)
ಸ್ಮಿತ್ ಭವಿಷ್ಯ ಕುರಿತು ಮಾತನಾಡಿರುವ ಸಿಎ ಮಂಡಳಿ ಚೇರ್ಮನ್ ಇಯರ್ಲ್ ಎಡ್ಡಿಂಗ್ಸ್," ಸ್ಮಿತ್ಗೆ ನಾಯಕತ್ವ ಕೊಡಬೇಕೆಂಬ ಆಲೋಚನೆ ನಮ್ಮ ತಲೆಯಲ್ಲಿಲ್ಲ, ನಾವು ಈಗಾಗಲೇ ಉತ್ತಮ ನಾಯಕನನ್ನು ಪಡೆದುಕೊಂಡಿದ್ದೇವೆ. ಸ್ಟಿವ್ ತಂಡಕ್ಕೆ ಮಾತ್ರ ಸೇರಿಕೊಂಡಿದ್ದು, ಕೇವಲ ಬ್ಯಾಟ್ಸ್ಮನ್ ಆಗಿ ಮುಂದುವರಿಯಲಿದ್ದಾರೆ. ಇದುವೆರಗೂ ನಾಯಕತ್ವ ಬದಲಿಸುವ ಬಗ್ಗೆ ಯಾವುದೇ ಸಭೆಯಲ್ಲಿ ಯಾರು ಮಾತನಾಡಿಲ್ಲ" ಎಂದು ಎಡ್ಡಿಂಗ್ಸ್ ತಿಳಿಸಿದ್ದಾರೆ.
ಆ ಮೂವರು(ಸ್ಮಿತ್,ವಾರ್ನರ್,ಬ್ಯಾನ್ಕ್ರಾಫ್ಟ್) ಮರಳಿ ತಂಡಕ್ಕೆ ಸೇರಿಕೊಂಡಿರುವುದಕ್ಕೆ ನಮಗೆ ಖುಷಿಯಾಗಿದೆ. ಅವರು ತಂಡದಲ್ಲಿ ಉತ್ತಮ ಮಾರ್ಗದಲ್ಲಿ ಆಡುವತ್ತಾ ಗಮನ ನೀಡಬೇಕು. ಆ ಕಡೆಗೆ ಮಾತ್ರ ನಮ್ಮ ಗಮನವಿದೆ. ಪೇನ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ನಮಗೆ ಅವರ ನಾಯಕತ್ವ ಖುಷಿ ತಂದಿದೆ ಎಂದು ಅವರು ಹೇಳಿದ್ದಾರೆ.