ETV Bharat / sports

ವಿಲಿಯಮ್ಸನ್​​​ ಪ್ರಕಾರ 3 ಫಾರ್ಮೆಟ್​ಗಳಲ್ಲಿ ಬೆಸ್ಟ್​ ಬ್ಯಾಟ್ಸ್​ಮನ್​ ಯಾರು ಗೊತ್ತಾ? - Virat Kohli is best batsman in all formats

ಮೂರು ಫಾರ್ಮೆಟ್​​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ, ಜೋ ರೂಟ್​, ಸ್ಟಿವ್​ ಸ್ಮಿತ್​ ಹಾಗೂ ಪಾಕಿಸ್ತಾನದ ಬಾಬರ್​ ಅಜಮ್​ ಕೂಡ ಈ ಸ್ಪರ್ಧೆಗೆ ಇದೆ. ಆದರೆ, ವಿಲಿಯಮ್ಸನ್​ ವಿರಾಟ್​ ಕೊಹ್ಲಿ ಎಲ್ಲ ಮಾದರಿಯಲ್ಲಿ ಕೊಹ್ಲಿಯೇ ಬೆಸ್ಟ್​ ಎಂದು ಹೇಳಿದ್ದಾರೆ.

India vs New Zealand
ವಿರಾಟ್​ ಕೊಹ್ಲಿ-ವಿಲಿಯಮ್ಸನ್​​
author img

By

Published : Feb 20, 2020, 7:48 PM IST

ವೆಲ್ಲಿಂಗ್ಟನ್: ಕಳೆದ ನಾಲ್ಕೈದು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್ ಪಟ್ಟ ಪಡೆಯಲು ಹಲವು ದಿಗ್ಗಜರಿಂದ ಪೈಪೋಟಿ ನಡೆಯುತ್ತಿದೆ. ಆದರೆ, ಕಿವೀಸ್​ ನಾಯಕ ವಿಲಿಯಮ್ಸನ್​ ಟೀಮ್​ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಪ್ರಸ್ತುತ ಮೂರು ವಿಭಾಗದ ಕ್ರಿಕೆಟ್​​ನ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದಿದ್ದಾರೆ.

ಮೂರು ಫಾರ್ಮೆಟ್​​​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ, ಜೋ ರೂಟ್​, ಸ್ಟಿವ್​ ಸ್ಮಿತ್​ ಹಾಗೂ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಬಾಬರ್​ ಅಜಮ್​ ಕೂಡ ಈ ಸ್ಪರ್ಧೆಗೆ ಪೈಪೋಟಿಗೆ ಇಳಿದಿದ್ದಾರೆ.

India vs New Zealand
ವಿರಾಟ್​ ಕೊಹ್ಲಿ

ಭಾರತದ ವಿರುದ್ಧ ಶುಕ್ರವಾರದಿಂದ ನಡೆಯುವ ಟೆಸ್ಟ್​ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಲಿಯಮ್ಸನ್​ , ಮಾಧ್ಯಮದವರ ಕ್ರಿಕೆಟ್​ನ ಮೂರು ಪ್ರಕಾರದಲ್ಲಿ ಬೆಸ್ಟ್​ ಬ್ಯಾಟ್ಸ್​ಮನ್​ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ್ದು," ಖಂಡಿತವಾಗಿಯೂ ವಿರಾಟ್​ ಕೊಹ್ಲಿ ಬೆಸ್ಟ್​, ಯಾವುದೇ ಅನುಮಾನ ಬೇಡ, ಭಾರತ ತಂಡವೂ ಕೂಡ ಉತ್ತಮ ಗುಣಮಟ್ಟದ ತಂಡವಾಗಿದೆ. ಅಲ್ಲದೇ, ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಅವರೇ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ" ಎಂದು ಕೊಹ್ಲಿ ಹಾಗೂ ಭಾರತ ತಂಡವನ್ನು ವಿಲಿಯಮ್ಸನ್​ ಮೆಚ್ಚಿಕೊಂಡಿದ್ದಾರೆ.

ಕೇನ್​ ವಿಲಿಯಮ್ಸನ್​

ಭಾರತ ತಂಡದ ನಾಯಕ ಕೊಹ್ಲಿ ಪ್ರಸ್ತುತ ಟೆಸ್ಟ್​ ಹಾಗೂ ಏಕದಿನ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ನಂಬರ್​ ಒನ್​ ಸ್ಥಾನ ಕಾಯ್ದುಕೊಂಡಿದ್ದಾರೆ.

ಭಾರತ ತಂಡ ಈಗಾಗಲೇ ಟಿ-20 ಸರಣಿಯನ್ನು 5-0ಯಲ್ಲಿ ಗೆದ್ದು, ಏಕದಿನ ಸರಣಿಯನ್ನು 3-0ಯಲ್ಲಿ ಸೋಲುಕಂಡಿದೆ. ಇನ್ನು ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಇದುವರೆಗೆ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ, ಭಾರತಕ್ಕೆ ಈ ಸರಣಿ ಇಂದಿನ ಸರಣಿಗಿಂತ ಕ್ಲಿಷ್ಟಕರವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.