ರಾವಲ್ಪಿಂಡಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಪಾಕಿಸ್ತಾನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಆಟಗಾರರ ಹೆಸರನ್ನು ಮುಖ್ಯ ತರಬೇತುದಾರರೊಂದಿಗೆ ಸಮಾಲೋಚಿಸಿ ಆಯ್ಕೆ ಮಾಡಲಾಗಿದೆ. ಎರಡನೇ ಟೆಸ್ಟ್ ಗುರುವಾರದಿಂದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕರಾಚಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಟೆಸ್ಟ್ ಸರಣಿಯ ನಂತರ ಮೂರು ಟಿ 20 ಪಂದ್ಯಗಳು ಫೆಬ್ರವರಿ 11, 13 ಮತ್ತು 14 ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.
2ನೇ ಟೆಸ್ಟ್ ಪಂದ್ಯಕ್ಕೆ ಪಾಕಿಸ್ತಾನ ತಂಡ:
- ಆರಂಭಿಕ ಆಟಗಾರರು - ಅಬಿದ್ ಅಲಿ ಮತ್ತು ಇಮ್ರಾನ್ ಬಟ್
- ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು - ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಆಲಂ ಮತ್ತು ಸೌದ್ ಶಕೀಲ್
- ಆಲ್‌ರೌಂಡರ್‌ಗಳು - ಫಹೀಮ್ ಅಶ್ರಫ್ ಮತ್ತು ಮೊಹಮ್ಮದ್ ನವಾಜ್
- ವಿಕೆಟ್ ಕೀಪರ್ಸ್ - ಮೊಹಮ್ಮದ್ ರಿಜ್ವಾನ್ (ಉಪನಾಯಕ) ಮತ್ತು ಸರ್ಫರಾಜ್ ಅಹ್ಮದ್
- ಸ್ಪಿನ್ನರ್‌ಗಳು - ನೌಮನ್ ಅಲಿ, ಸಾಜಿದ್ ಖಾನ್ ಮತ್ತು ಯಾಸಿರ್ ಶಾ
- ವೇಗದ ಬೌಲರ್‌ಗಳು - ಹರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ ಮತ್ತು ತಬೀಶ್ ಖಾನ್