ನವದೆಹಲಿ: ಒಂದೇ ವರ್ಷದಲ್ಲಿ ಐಪಿಎಲ್, ಏಕದಿನ ಹಾಗೂ ಟಿ- 20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಮಿಂಚ್ಚಿದ್ದ ನವ್ದೀಪ್ ಸೈನಿ ಕೊರೊನಾ ಲಾಕ್ಡೌನ್ ಸಮಯದಲ್ಲಿ ಜಿಮ್ನಲ್ಲಿ ಬೆವರಿಳಿಸಿದ್ದು,ಅವರ ಫಿಟ್ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರನ್ನಿಂಗ್ ಟ್ರ್ಯಾಕ್ನಲ್ಲಿ ನಡೆದು ಬರುತ್ತಿರುವ ಸಿಕ್ಸ್ಪ್ಯಾಕ್ ಫೋಟೋವನ್ಬು ಶೇರ್ ಮಾಡಿಕೊಂಡಿದ್ದಾರೆ. ‘ಇದು ಸುಲಭವಾಗಿದ್ದರೆ, ಆ ದಾರಿಯಲ್ಲಿ ನಾನು ಇರುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಕಳೆದ ಮೂರು ತಿಂಗಳಿನಿಂದ ಕೊರೊನಾ ಯಾವುದೇ ಮಾದರಿಯ ಕ್ರಿಕೆಟ್ ನಡೆದಿಲ್ಲ, ಕೊರೊನಾ ಲಾಕ್ಡೌನ್ ವೇಳೆ ಕುಟುಂಬದ ಜೊತೆ ಹಾಗೂ ಸಾಮಾಜಿಕ ಜಾಲಾತಾಣಗಳಲ್ಲಿ ಲೈವ್ ಚಾಟ್ ಶೋ ನಡೆಸುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿಯೂ ಭಾರತ ತಂಡದ ಭವಿಷ್ಯದ ಸ್ಟಾರ್ ಬೌಲರ್ ಬಿಡುವಿನ ವೇಳೆಯಲ್ಲಿಯೂ ಸೈನಿ ತಮ್ಮ ಫಿಟ್ನೆಸ್ ಕಡೆಗೆ ಗಮನ ನೀಡುತ್ತಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೆನಿಸ್ ಪ್ಲೇಯರ್ ಯೂಕಿ ಬಾಂಬ್ರಿ ಸೈನಿಯನ್ನ ಫುಟ್ಬಾಲ್ ದಿಗ್ಗಜ ಕ್ರಿಶ್ಚಿಯಾನೋ ರೊನಾಲ್ಡೊಗೆ ಹೋಲಿಕೆ ಮಾಡಿದ್ದಾರೆ.
ಸೈನಿ ಭಾರತದ ಪರ 5 ಏಕದಿನ ಪಂದ್ಯಗಳಿಂದ 5 ವಿಕೆಟ್, 9 ಟಿ-20 ಪಂದ್ಯಗಳಿಂದ 13 ವಿಕೆಟ್ ಹಾಗೂ 13 ಐಪಿಎಲ್ ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ. 46 ಪ್ರಥಮ ದರ್ಜೆ ಪಂದ್ಯಗಳಿಂದ 125 ವಿಕೆಟ್, 53 ಲಿಸ್ಟ್ ಎ ಪಂದ್ಯಗಳಿಂದ 84 ವಿಕೆಟ್ ಪಡೆದಿದ್ದಾರೆ.