ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಸರಣಿಯ ಪದಾರ್ಪಣೆ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದ ಭಾರತದ ಐವರು ಆಟಗಾರರು ಸೇರಿ ಆರು ಕ್ರಿಕೆಟಿಗರಿಗೆ ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರ ಎಸ್ಯುವಿ ಕಾರು ಗಿಫ್ಟ್ ಘೋಷಣೆ ಮಾಡಿದ್ದರು.
ಟೆಸ್ಟ್ ಸೀರಿಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ಗೆ ಈ ವಿಶೇಷ ಉಡುಗೊರೆ ನೀಡುವುದಾಗಿ ತಿಳಿಸಿದ್ದರು.
ಇದೀಗ ಉಡುಗೊರೆಯ ಕಾರು ಆಟಗಾರರ ಮನೆ ತಲುಪಿವೆ. ಇದಕ್ಕೆ ಪ್ರತಿಯಾಗಿ ಯಾರ್ಕರ್ ಕಿಂಗ್ ನಟರಾಜನ್ ಆನಂದ್ ಮಹೀಂದ್ರಾ ಅವರಿಗೆ ವಿಶೇಷ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.
-
As I drive the beautiful @Mahindra_Thar home today, I feel immense gratitude towards Shri @anandmahindra for recognising my journey & for his appreciation. I trust sir, that given your love for cricket, you will find this signed shirt of mine from the #Gabba Test, meaningful 2/2
— Natarajan (@Natarajan_91) April 1, 2021 " class="align-text-top noRightClick twitterSection" data="
">As I drive the beautiful @Mahindra_Thar home today, I feel immense gratitude towards Shri @anandmahindra for recognising my journey & for his appreciation. I trust sir, that given your love for cricket, you will find this signed shirt of mine from the #Gabba Test, meaningful 2/2
— Natarajan (@Natarajan_91) April 1, 2021As I drive the beautiful @Mahindra_Thar home today, I feel immense gratitude towards Shri @anandmahindra for recognising my journey & for his appreciation. I trust sir, that given your love for cricket, you will find this signed shirt of mine from the #Gabba Test, meaningful 2/2
— Natarajan (@Natarajan_91) April 1, 2021
ಇದನ್ನೂ ಓದಿ: ನಿತೀಶ್ ರಾಣಾಗೆ ಕೊರೊನಾ ಬಂದಿದ್ದು ನಿಜ, ಆದ್ರೀಗ ವರದಿ ನೆಗೆಟಿವ್ ಬಂದಿದೆ- ಕೆಕೆಆರ್
ಐತಿಹಾಸಿಕ ಗಬ್ಬಾ ಟೆಸ್ಟ್ ಪಂದ್ಯದ ವೇಳೆ ತಾವು ಹಾಕಿಕೊಂಡಿದ್ದ ಟೀಂ ಇಂಡಿಯಾ ಜರ್ಸಿ ಮೇಲೆ 'ಥ್ಯಾಂಕ್ಸ್' ಎಂದು ಬರೆದು, ಆನಂದ್ ಮಹೀಂದ್ರಾಗೆ ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಅವರು ಮಾಹಿತಿ ಶೇರ್ ಮಾಡಿದ್ದಾರೆ.
ನಟರಾಜನ್ ಟ್ವೀಟ್ ಇಂತಿದೆ..
'ಭಾರತಕ್ಕಾಗಿ ಕ್ರಿಕೆಟ್ ಆಡುವುದು ನನ್ನ ಜೀವನದ ದೊಡ್ಡ ಸೌಭಾಗ್ಯ. ದಾರಿಯುದ್ದಕ್ಕೂ ನಾನು ಸ್ವೀಕರಿಸಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಆಭಾರಿ. ಜನರ ಬೆಂಬಲ ಹಾಗೂ ಪ್ರೋತ್ಸಾಹ ನನಗೆ ಹೊಸ ಮಾರ್ಗ ಹುಡುಕಲು ಸಹಕಾರಿಯಾಗಿದೆ'.
'ಇದೀಗ ಸುಂದರವಾದ ಮಹೀಂದ್ರಾ ಥಾರ್ ಅನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದೇನೆ. ಆನಂದ್ ಮಹೀಂದ್ರಾ ಅವರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಜರ್ನಿಯನ್ನು ಗುರುತಿಸಿದ್ದಕ್ಕಾಗಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ಇದೀಗ ನಾನು ಗಬ್ಗಾ ಟೆಸ್ಟ್ನಲ್ಲಿ ಹಾಕಿಕೊಂಡಿದ್ದ ಜರ್ಸಿ ಮೇಲೆ ಸಹಿ ಮಾಡಿ ನಿಮಗೆ ನೀಡುತ್ತಿದ್ದೇನೆ' ಎಂದಿದ್ದಾರೆ.