ETV Bharat / sports

ಆತ ತನ್ನ ಬೌಲಿಂಗ್​ನಿಂದ್ಲೇ ಪಾಕ್‌ಗೆ ಹಲವು ಟೆಸ್ಟ್​ ಪಂದ್ಯಗಳನ್ನು ಗೆದ್ದು ಕೊಡಲಿದ್ದಾನೆ: ಮಿಸ್ಬಾ ಭವಿಷ್ಯ

ನಸೀಮ್ ಶಾ ಪಾಕಿಸ್ತಾನ ತಂಡದ ಭಾಗವಾಗಿದ್ದು, ಪ್ರಸ್ತುತ ಓಲ್ಡ್ ಟ್ರ್ಯಾಫೋರ್ಡ್​​ನಲ್ಲಿ ಬುಧವಾರದಿಂದ ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್​ ಸರಣಿ
ನಸೀಮ್ ಶಾ
author img

By

Published : Aug 4, 2020, 2:41 PM IST

ಮ್ಯಾಂಚೆಸ್ಟರ್​: ಯುವ ಬೌಲರ್​ ನಸೀಮ್​ ಶಾ ಬಗ್ಗೆ ಪಾಕಿಸ್ತಾನದ ಕೋಚ್​ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಮಿಸ್ಬಾ ಉಲ್​ ಹಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಪಾಕ್​ ತಂಡಕ್ಕೆ ತನ್ನ ಬೌಲಿಂಗ್ ಶಕ್ತಿಯಿಂದ ಟೆಸ್ಟ್​ ಪಂದ್ಯಗಳನ್ನು ಗೆದ್ದುಕೊಡಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಕ್ರಿಕೆಟ್‌ಗೆ​ ಪದಾರ್ಪಣೆ ಮಾಡುವ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಿಶ್ವದ ಅತಿ ಕಿರಿಯ ವೇಗಿ ಎಂಬ ಶ್ರೇಯಕ್ಕೆ ಇವರು ಪಾತ್ರರಾಗಿದ್ದರು. ಇದೇ ವರ್ಷ ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಹ್ಯಾಟ್ರಿಕ್​ ಸಾಧಿಸಿದ ಅತ್ಯಂತ ಕಿರಿಯ ಬೌಲರ್​ ಎಂಬ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ.

ವಾಕರ್​ ಯೂನಿಸ್​ ಮತ್ತು ನಾನು ಅವರನ್ನು(ನಸೀಮ್​) ಗಡಾಫಿ ಕ್ರೀಡಾಂಗಣದಲ್ಲಿ ನೋಡಿದಾಗ ನಮ್ಮ ಕಣ್ಣಿಗೆ ಅವರು ಪರಿಪೂರ್ಣ ಬೌಲರ್ ರೀತಿಯಲ್ಲಿ ಕಂಡರು. ಅದಕ್ಕಾಗಿ ಅವರನ್ನು ಪ್ರಥಮ ದರ್ಜೆ ಕ್ರಿಕೆಟ್​ ಆಡದಿದ್ದರೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದೆವು ಎಂದು ಮಿಸ್ಬಾ ಹೇಳಿದ್ದಾರೆ.

ನಸೀಮ್ ಶಾ
ನಸೀಮ್ ಶಾ

ನಸೀಮ್, ಆಸ್ಟ್ರೇಲಿಯಾ ಪ್ರವಾಸಕ್ಕೆ ಬರುವ ಮುನ್ನ ಕೇವಲ 4 ಪಂದ್ಯಗಳನ್ನಾಡಿ 17 ವಿಕೆಟ್​ ಪಡೆದಿದ್ದರು. ನಾವು ಅವರ ಸಾಮರ್ಥ್ಯವನ್ನು ನೋಡಲು ಬಯಸಿದ್ದೆವು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಅವರೊಬ್ಬ ಉತ್ತಮ ಬೌಲರ್​ ಎನ್ನುವುದಕ್ಕೆ ಪುರಾವೆಗಳನ್ನು ಪಡೆದುಕೊಂಡಿದ್ದೇವೆ. ಆತ ಈಗಾಗಲೇ ಹ್ಯಾಟ್ರಿಕ್​ ವಿಕೆಟ್​ ಹಾಗೂ 5 ವಿಕೆಟ್​ ಸಾಧನೆ ಕೂಡ ಮಾಡಿದ್ದಾರೆ. ಅವರು ಟೆಸ್ಟ್​ ಪಂದ್ಯವನ್ನು ಗೆದ್ದುಕೊಡಬಲ್ಲ ಬೌಲರ್​ ಆಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್​ ಕ್ರಿಕೆಟಿಗರು ತಮ್ಮನ್ನು ಮಗುವಿನಂತೆ ಭಾವಿಸದಿರಿ ಎಂದು ಶಾ ಈಗಾಗಲೇ ಎದುರಾಳಿಗೆ ಸಂದೇಶ ನೀಡಿದ್ದಾರೆ.

ಬೌಲಿಂಗ್​ ಕೋಚ್​ ವಾಕರ್​ ಯೂನೀಸ್​ ಜೊತೆ ನಸೀಮ್​
ಬೌಲಿಂಗ್​ ಕೋಚ್​ ವಾಕರ್​ ಯೂನಿಸ್​ ಜೊತೆ ನಸೀಮ್​

"ಅವರು ನನ್ನನ್ನು ಸಣ್ಣ ಮಗುವಿನಂತೆ ನೋಡಿಕೊಂಡರೆ ಅದು ಅವರಿಗೆ ದೊಡ್ಡ ನಷ್ಟವಾಗಲಿದೆ. ಇಲ್ಲಿ ವಯಸ್ಸು ಅಪ್ರಸ್ತುತ. ನನ್ನ ಬೌಲಿಂಗ್ ಮುಖ್ಯವಾಗುತ್ತದೆ. ಆದ್ದರಿಂದ ನನ್ನನ್ನು ಗಂಭೀರವಾಗಿ ಪರಿಗಣಿಸಲಿ" ಎಂದು ನಸೀಮ್ ಶಾ ವಿಡಿಯೊ ಸಂವಾದದಲ್ಲಿ​ ಇಂಗ್ಲೆಂಡ್​ ತಂಡಕ್ಕೆ ಎಚ್ಚರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.