ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನೆಲದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಸರಣಿಗಾಗಿ ಸಜ್ಜುಗೊಳ್ಳುತ್ತಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮುಂದಿನ ಮೂರು ವರ್ಷಗಳ ಎಲ್ಲ ಮಾದರಿ ಕ್ರಿಕೆಟ್ನಲ್ಲೂ ಭಾಗಿಯಾಗುವುದಾಗಿ ಹೇಳಿದ್ದಾರೆ.
2008ರಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿರುವ ಕೊಹ್ಲಿ ಈಗಾಗಲೇ 84 ಟೆಸ್ಟ್ ಪಂದ್ಯ, 248 ಏಕದಿನ ಹಾಗೂ 82 ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದು, ಹೆಚ್ಚಿನ ಒತ್ತಡದ ನಡುವೆ ಕೂಡ ಮುಂದಿನ ಮೂರು ವರ್ಷಗಳ ಕಾಲ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
ಮುಂದಿನ ಮೂರು ವರ್ಷಗಳ ಮನೋಸ್ಥಿತಿಗಾಗಿ ಈಗಿನಿಂದಲೇ ತಯಾರಿ ನಡೆಸಿದ್ದಾಗಿ ತಿಳಿಸಿದರು. ಇದೇ ವೇಳೆ, ನವದೀಪ್ ಸೈನಿ ಕುರಿತು ಮಾತನಾಡಿರುವ ಕೊಹ್ಲಿ, ಆತ ಒಬ್ಬ ಅದ್ಭುತ ಪ್ಲೇಯರ್, ಎಲ್ಲರಗಿಂತಲೂ ವಿಭಿನ್ನವಾಗಿ ಚಿಂತನೆ ನಡೆಸುವ ಸಾಮರ್ಥ್ಯ ಅವರ ಬಳಿ ಇದೆ. ಆರ್ಸಿಬಿಯಲ್ಲಿ ನನ್ನೊಂದಿಗೆ ಅವರು ತಂಡದಲ್ಲಿದ್ದು, ಈ ಸಲ ಮತ್ತಷ್ಟು ಬಲ ನೀಡಲಿದೆ ಎಂದು ತಿಳಿಸಿದ್ದಾರೆ.