ETV Bharat / sports

ಫೇಸ್​​ಬುಕ್​​ನಲ್ಲಿ ಐಪಿಎಲ್​ ಚರ್ಚೆ: ಅತಿ ಹೆಚ್ಚು ಸರ್ಚ್​ ಆದ ತಂಡ, ನಾಯಕ ಯಾರು ಗೊತ್ತಾ? ಗೆಸ್​ ಮಾಡಿ! - ಮುಂಬೈ ಇಂಡಿಯನ್ಸ್​ ತಂಡ

ಐಪಿಎಲ್‌ಗೆ ಸಂಬಂಧಿಸಿದಂತೆ ಫೇಸ್​​ಬುಕ್​ನಲ್ಲಿ ಮುಂಬೈ ಇಂಡಿಯನ್ಸ್​​ ಹೆಚ್ಚು ಸರ್ಚ್​ ಮಾಡಲಾದ ಮತ್ತು ಚರ್ಚೆ ಮಾಡಲಾದ ತಂಡ ಎಂದು ಗುರುತಿಸಿಕೊಂಡಿದೆ. ಅದೇ ರೀತಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಚರ್ಚೆ ಮಾಡಲಾದ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.​

mumbai-indians-virat-kohli-top-facebook-search-during-ipl
ಐಪಿಎಲ್​ ಕುರಿತು ಫೇಸ್​​ಬುಕ್​​ನಲ್ಲಿ ಚರ್ಚೆ: ಮುಂಬೈ ಇಂಡಿಯನ್ಸ್​ ತಂಡ - ವಿರಾಟ್​​ ಕೊಹ್ಲಿಗೆ ಅಗ್ರಸ್ಥಾನ
author img

By

Published : Nov 13, 2020, 10:33 AM IST

ನವದೆಹಲಿ: ಈ ಸಾಲಿನ ಐಪಿಎಲ್​ ಕುರಿತು ಫೇಸ್​​ಬುಕ್​​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಮತ್ತು ವಿರಾಟ್​​ ಕೊಹ್ಲಿ ಕುರಿತು ಹೆಚ್ಚು ಚರ್ಚೆಯಾಗಿದೆ.

ಐಪಿಎಲ್‌ಗೆ ಸಂಬಂಧಿಸಿದಂತೆ ಒಂದು ಕೋಟಿಗೂ ಹೆಚ್ಚು ಫೇಸ್​​ಬುಕ್​ನಲ್ಲಿ ಫೋಸ್ಟ್ ಮಾಡಲಾಗಿದೆಯೆಂದು ಫೇಸ್‌ಬುಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪೈಕಿ ಫೇಸ್​​ಬುಕ್​ನಲ್ಲಿ ಮುಂಬೈ ಇಂಡಿಯನ್ಸ್​​ ಹೆಚ್ಚು ಸರ್ಚ್​ ಮಾಡಲಾದ ಮತ್ತು ಚರ್ಚೆ ಮಾಡಲಾದ ತಂಡ ಎಂದು ಗುರುತಿಸಿಕೊಂಡಿದೆ. ಅದೇ ರೀತಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಹೆಚ್ಚು ಚರ್ಚೆ ಮಾಡಲಾದ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.​

ಐಪಿಎಲ್ ಬಗ್ಗೆ ಚರ್ಚಿಸುವವರಲ್ಲಿ ಸುಮಾರು ಶೇ.74ರಷ್ಟು ಮಂದಿ 18 ರಿಂದ 34 ವರ್ಷದೊಳಗಿನವರಾಗಿದ್ದಾರೆ. ಈ ಬಾರಿ ನಡೆದ ಚರ್ಚೆಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತರದ ಸ್ಥಾನ ಪಡೆದುಕೊಂಡಿವೆ.

ಫೇಸ್​​ಬುಕ್​​ನಲ್ಲಿ ಐಪಿಎಲ್​ ಕುರಿತು ನಡೆದ ಚರ್ಚೆಯಲ್ಲಿ, ಆಟಗಾರರ ವಿಷಯಕ್ಕೆ ಬಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್​​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಂತರ ಚೆನ್ನೈ ಸೂಪರ್ ಕಿಂಗ್ಸ್‌ನ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಇದ್ದಾರೆ. ಇನ್ನೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಬಿಹಾರದ ಹೆಚ್ಚು ಜನರು ಈ ಕುರಿತು ಚರ್ಚೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.