ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಮೇಲೆ ಸವಾರಿ ನಡೆಸಿರುವ ಮುಂಬೈ ಇಂಡಿಯನ್ಸ್ ತಂಡ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿ ಪ್ಲೇ-ಆಫ್ ಹೊಸ್ತಿಲಿಗೆ ಬಂದು ನಿಂತಿದೆ. ಇದರ ಜತೆಗೆ ಸೋಲು ಕಂಡಿರುವ ಚೆನ್ನೈ ತಂಡ ನಾಕ್ಔಟ್ ರೇಸ್ನಿಂದ ಹೊರಬಿದ್ದಿದೆ.
ಬೌಲ್ಟ್ ಮಾರಕ ಬೌಲಿಂಗ್ಗೆ ಚೆನ್ನೈ ತತ್ತರ... ಮುಂಬೈ ಗೆಲುವಿಗೆ 115ರನ್ ಟಾರ್ಗೆಟ್
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 115 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ಕೇವಲ 12.2 ಓವರ್ಗಳಲ್ಲಿ 116ರನ್ಗಳಿಕೆ ಮಾಡುವ ಮೂಲಕ ಗೆಲುವಿನ ನಗೆ ಬೀರಿತು. ಇದರ ಜತೆಗೆ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತಿದ್ದ ಮುಂಬೈ ತಿರುಗೇಟು ನೀಡಿತು. ಇದರ ಜತೆಗೆ ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ 37 ಎಸೆತಗಳಲ್ಲಿ 5 ಸಿಕ್ಸರ್, 6 ಬೌಂಡರಿ ಸೇರಿ ಅಜೇಯ 68 ರನ್ಗಳಿಕೆ ಮಾಡಿದ್ರೆ, ಡಿಕಾಕ್ 37 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿ ಸೇರಿ ಅಜೇಯ 46ರನ್ಗಳಿಕೆ ಮಾಡಿದರು. ಇಶಾನ್ ಕಿಶನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.
ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ಬೌಲ್ಟ್ ದಾಳಿಗೆ ತತ್ತರಿಸಿ ಕೇವಲ 43 ರನ್ಗಳಿಕೆ ಮಾಡುವಷ್ಟರಲ್ಲಿ 7ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ, ಕರನ್ 52ರನ್ಗಳಿಕೆ ಮಾಡಿ ತಂಡ 114 ರನ್ಗಳಿಕೆ ಮಾಡುವಂತೆ ಮಾಡಿದ್ದರು.
ಬೌಲ್ಟ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿ 18ಕ್ಕೆ 4 ವಿಕೆಟ್ ಪಡೆದು ಅಬ್ಬರಿಸಿದ್ರೆ, ಸಾಥ್ ನೀಡಿದ ಜಸ್ಪ್ರೀತ್ ಬುಮ್ರಾ (25ಕ್ಕೆ 2) ಮತ್ತು ರಾಹುಲ್ ಚಹರ್ (22ಕ್ಕೆ 2) ತಲಾ 2 ವಿಕೆಟ್ ಪಡೆದರೆ, ನೇಥನ್ ಕೌಲ್ಟರ್ ನೈಲ್ (25ಕ್ಕೆ 1) ಒಂದು ವಿಕೆಟ್ ಕಿತ್ತರು.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 11 ಪಂದ್ಯಗಳಿಂದ ಕೇವಲ ಮೂರಲ್ಲಿ ಗೆಲುವು ಸಾಧಿಸಿ 6 ಅಂಕಗಳಿಕೆ ಮಾಡಿ ಕೊನೆ ಸ್ಥಾನದಲ್ಲಿದೆ. ಜತೆಗೆ ನಾಕ್ಔಟ್ ಹಂತದಿಂದ ಹೊರಬಿದ್ದಿದೆ.