ಹೈದರಾಬಾದ್: ಟೀಂ ಇಂಡಿಯಾದ ಹಿರಿಯ ಆಟಗಾರ ಎಂ ಎಸ್ ಧೋನಿ ಕಂಬ್ಯಾಕ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಮುಂಬರುವ ಐಪಿಎಲ್ನಲ್ಲಿ ಯಶಸ್ವಿ ಚೆನ್ನೈ ಸೂಪರ್ ಕಿಂಗ್ ತಂಡವನ್ನು ಮಾಹಿಯೇ ಮುನ್ನಡೆಸಲಿದ್ದಾರೆ.
13ನೇ ಆವೃತ್ತಿಗೆ ಭರದ ಸಿದ್ಧತೆ ನಡೆಯುತ್ತಿರುವ ವೇಳೆಯಲ್ಲೇ ಧೋನಿ ಬಗ್ಗೆ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಧೋನಿ 2021ರ ಮೆಗಾ ಹರಾಜಿಗೆ ತಮ್ಮನ್ನು ತಂಡದಿಂದ ಕೈಬಿಡುವಂತೆ ಚೆನ್ನೈ ಫ್ರಾಂಚೈಸಿಗೆ ಮನವಿ ಮಾಡಿದ್ದಾರೆ.
IPL ಪ್ರದರ್ಶನದ ಮೇಲೆ ಧೋನಿ ಕ್ರಿಕೆಟ್ ಭವಿಷ್ಯ: ಕೊನೆಗೂ ಮೌನ ಮುರಿದ ಕೋಚ್ ಶಾಸ್ತ್ರಿ
ಫ್ರಾಂಚೈಸಿಗಳು ಬೇರೆ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ತಮ್ಮನ್ನು ಕೈಬಿಟ್ಟು ನಂತರದಲ್ಲಿ ರೈಟು ಟು ಮ್ಯಾಚ್(RTM) ಮೂಲಕ ಕಡಿಮೆ ಹಣಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
"2020ರ ಆವೃತ್ತಿಯಲ್ಲಿ ಧೋನಿ ಮೈದಾನಕ್ಕಿಳಿಯುವುದು ಖಚಿತ. ಆದರೆ, 2021 ಆವೃತ್ತಿಯ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟು ನಂತರದಲ್ಲಿ ಆರ್ಟಿಎಂ ಮೂಲಕ ಕಡಿಮೆ ಹಣಕ್ಕೆ ತಂಡಕ್ಕೆ ನನ್ನನ್ನು ಮತ್ತೆ ಸೇರಿಸಿಕೊಳ್ಳಿ ಎಂದಿದ್ದಾರೆ" ಎಂದು ಚೆನ್ನೈ ಫ್ರಾಂಚೈಸಿ ಸುದ್ದಿಯನ್ನು ಖಚಿತಪಡಿಸಿದೆ.
ಈ ಬಾರಿ ಧೋನಿ ಕಂಬ್ಯಾಕ್ ಬಹುತೇಕ ಪಕ್ಕಾ..! ಯಾವಾಗ ಗೊತ್ತಾ..?
"ಧೋನಿಯನ್ನು ಕಡಿಮೆ ಮೊತ್ತಕ್ಕೆ ಮತ್ತೆ ಸೇರಿಸಿಕೊಳ್ಳುವ ಯೋಜನೆಯಿದೆ. ನಾಯಕನಾಗಿ ಧೋನಿ ತಂಡಕ್ಕಾಗಿ ತಮ್ಮ ಹಣವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಧೋನಿಯ ಮಹತ್ವ ನಮಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಅವರನ್ನು ಹರಾಜಿನಲ್ಲಿ ಬಿಟ್ಟುಕೊಡುವ ಮಾತೇ ಇಲ್ಲ" ಎಂದು ಸಿಎಸ್ಕೆ ಹೇಳಿದೆ.