ETV Bharat / sports

ಗುತ್ತಿಗೆಯಿಂದ ಹೊರ ಬಿದ್ದ ಬೆನ್ನಲ್ಲೇ ಪಿಸಿಬಿ ವಾಟ್ಸಪ್​ ಗ್ರೂಪ್​ ತೊರೆದ ಹಸನ್​ ಅಲಿ, ಅಮೀರ್​ - Pakistan cricket contract

ಅನುಭವಿ ಬೌಲರ್​ಗಳಾದ ಮೊಹಮ್ಮದ್​ ಅಮೀರ್​, ವಹಾಬ್​ ರಿಯಾಜ್​ ಹಾಗೂ ಹಸನ್​​ ಅಲಿ ಗುತ್ತಿಗೆಯಿಂದ ಹೊರ ಬಿದ್ದಿದ್ದರು. ಇದೀಗ ಅವರು ಪಿಸಿಬಿ ಫಿಟ್ನೆಸ್​​ ಹಾಗೂ ಇತರೆ ಮಾಹಿತಿ ಹಂಚಿಕೊಳ್ಳಲು ಕ್ರಿಯೇಟ್​ ಮಾಡಿದ್ದ ವಾಟ್ಸ್​​ಆ್ಯಪ್​​ ಗ್ರೂಪ್​ನಿಂದ ಅಮೀರ್​ ಹಾಗೂ ಹಸನ್​ ಅಲಿ ಹೊರ ಬಂದಿದ್ದಾರೆ.

ಪಿಸಿಬಿ ವಾಟ್ಸಪ್​ ಗ್ರೂಪ್​ ತೊರೆದ ಹಸನ್​ ಅಲಿ, ಅಮೀರ್​

author img

By

Published : May 21, 2020, 9:51 AM IST

ಲಾಹೋರ್​: ಪಾಕಿಸ್ತಾನ ಸ್ಟಾರ್ ಬೌಲರ್​ಗಳಾದ ಹಸನ್​ ಅಲಿ ಹಾಗೂ ಮೊಹಮದ್​ ಅಮೀರ್​ ಪಾಕಿಸ್ತಾನ ತಂಡದ ಕೋಚ್​ ಮಿಸ್ಬಾ ಉಲ್​ ಹಕ್​ ಕ್ರಿಯೇಟ್​ ಮಾಡಿದ್ದ ವಾಟ್ಸ್​ಆ್ಯಪ್​​​ ಗ್ರೂಪ್​ನಿಂದ ಹೊರ ಬಂದಿದ್ದಾರೆ.

ಕಳೆದ ವಾರ ಪಿಸಿಬಿ 2020-21ರ ಆವೃತ್ತಿಯ 18 ಆಟಗಾರರ ಕೇಂದ್ರೀಯ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಅನುಭವಿ ಬೌಲರ್​ಗಳಾದ ಮೊಹಮ್ಮದ್​ ಅಮೀರ್​, ವಹಾಬ್​ ರಿಯಾಜ್​ ಹಾಗೂ ಹಸನ್​​ ಅಲಿ ಗುತ್ತಿಗೆಯಿಂದ ಹೊರ ಬಿದ್ದಿದ್ದರು. ಇದೀಗ ಅವರು ಪಿಸಿಬಿ ಫಿಟ್ನೆಸ್​​​ ಹಾಗೂ ಇತರೆ ಮಾಹಿತಿ ಹಂಚಿಕೊಳ್ಳಲು ಕ್ರಿಯೇಟ್​ ಮಾಡಿದ್ದ ವಾಟ್ಸ್​ಆ್ಯಪ್​​ ಗ್ರೂಪ್​ನಿಂದ ಅಮೀರ್​ ಹಾಗೂ ಹಸನ್​ ಅಲಿ ಹೊರ ಬಂದಿದ್ದಾರೆ.

ಆದರೆ ಹಿರಿಯ ವೇಗಿ ವಹಾಬ್​ ರಿಯಾಜ್ ಮಾತ್ರ ಇನ್ನೂ ವಾಟ್ಸ್​ಆ್ಯಪ್​​​ ಗ್ರೂಪ್​ನಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಕೇಂದ್ರೀಯ ಗುತ್ತಿಗೆಯಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಹಸನ್​ ಅಲಿ ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಸನ್​ ಅಲಿ ಭಾರತದ ವಿರುದ್ಧ 2019ರ ವಿಶ್ವಕಪ್​ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರೆ, ಅಮೀರ್ ಹಾಗೂ ರಿಯಾಜ್​ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ಸರಣಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.