ETV Bharat / sports

ಇಂಗ್ಲೆಂಡ್​ ವಿರುದ್ಧ ಗೆಲ್ಲಬೇಕಾದರೆ ಆತನ ವಿರುದ್ಧ ರಣತಂತ್ರ ರೂಪಿಸಲೇಬೇಕು: ಮಿಚೆಲ್​ ಸ್ಟಾರ್ಕ್​ - Cricket England

ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಜೋಸ್​ ಬಟ್ಲರ್​ ಮೊದಲ ಪಂದ್ಯದಲ್ಲಿ 44 ಹಾಗೂ ಎರಡನೇ ಪಂದ್ಯದಲ್ಲಿ ಆ್ಯಂಕರ್​ ರೋಲ್​ ನಿಭಾಯಿಸಿ 77 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಬಟ್ಲರ್​ ಅವರ ಈ ಪ್ರಚಂಡ ಫಾರ್ಮ್​ ಆಸೀಸ್​ ಬೌಲರ್​ಗಳಿಗೆ ದೊಡ್ಡ ತಲೆ ನೋವು ತಂದಿದ್ದು, ಅವರನ್ನು ಹೇಗಾದರೂ ಕಟ್ಟಿಹಾಕಲೆ ಬೇಕು ಎಂದು ಸ್ಟಾರ್ಕ್​ ಹೇಳಿದ್ದಾರೆ.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​
author img

By

Published : Sep 7, 2020, 8:22 PM IST

ಸೌತಾಂಪ್ಟನ್​: ಮೊದಲೆರಡು ಟಿ20 ಪಂದ್ಯಗಳೆರಡರಲ್ಲೂ ಆಸ್ಟ್ರೇಲಿಯಾ ಬೌಲರ್​ಗಳ ಮೇಲೆ ಪಾರಮ್ಯ ಮೆರದು ಇಂಗ್ಲೆಂಡ್​ ಜಯಕ್ಕೆ ಕಾರಣರಾಗಿರುವ ಜೋಸ್​ ಬಟ್ಲರ್​ ವಿರುದ್ಧ ರಣನೀತಿ ರೂಪಿಸದಿದ್ದರೆ ಗೆಲ್ಲುವುದು ಕಷ್ಟ ಎಂದು ಆಸೀಸ್​ ವೇಗಿ ಮಿಚೆಲ್ ಸ್ಟಾರ್ಕ್​ ಅಭಿಪ್ರಾಯ ಪಟ್ಟಿದ್ದಾರೆ.

ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಜೋಸ್​ ಬಟ್ಲರ್​ ಮೊದಲ ಪಂದ್ಯದಲ್ಲಿ 44 ಹಾಗೂ ಎರಡನೇ ಪಂದ್ಯದಲ್ಲಿ ಆ್ಯಂಕರ್​ ರೋಲ್​ ನಿಭಾಯಿಸಿ 77 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಬಟ್ಲರ್​ ಅವರ ಈ ಪ್ರಚಂಡ ಫಾರ್ಮ್​ ಆಸೀಸ್​ ಬೌಲರ್​ಗಳಿಗೆ ದೊಡ್ಡ ತಲೆ ನೋವು ತಂದಿದ್ದು, ಅವರನ್ನು ಹೇಗಾದರೂ ಕಟ್ಟಿಹಾಕಲೆ ಬೇಕು ಎಂದು ಸ್ಟಾರ್ಕ್​ ಹೇಳಿದ್ದಾರೆ.

ಜೋಸ್​ ಬಟ್ಲರ್​
ಜೋಸ್​ ಬಟ್ಲರ್​

" ಈ ಹಿಂದಿನ ಎರಡು ಪಂದ್ಯಗಳಲ್ಲಿ ನಮ್ಮ ಹಾದಿಗೆ ಜೋಸ್‌ ಬಟ್ಲರ್ ಅಡ್ಡಗಾಲಾಗಿದ್ದಾರೆ. ಅವರನ್ನು ಹೇಗಾದರೂ ಕಟ್ಟಿ ಹಾಕುವುದು ನಮಗೆ ಅನಿವಾರ್ಯವಾಗಿದೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಅವರನ್ನು ಕಟ್ಟಿಹಾಕುವುದು ತುಂಬಾ ಕಷ್ಟ. ಆದರೆ, ಕೊನೆಯ ಪಂದ್ಯ ಹಾಗೂ ಏಕದಿನ ಸರಣಿಯಲ್ಲಿ ಅವರನ್ನು ನಿಯಂತ್ರಿಸಲು ತಂಡದೊಂದಿಗೆ ಚರ್ಚೆ ಮಾಡುತ್ತೇವೆ " ಎಂದು ಸ್ಟ್ಯಾರ್ಕ್‌ ಹೇಳಿದ್ದಾರೆ.

ವಿಶ್ವ ಟಿ20 ಶ್ರೇಯಾಂಕದಲ್ಲಿ ಮೊದಲ ಶ್ರೇಯಾಂಕದಲ್ಲಿದ್ದ ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ 163 ರನ್​ಗಳನ್ನು ಚೇಸ್​ ಮಾಡಲಾಗದೆ 2 ರನ್​ಗಳಿಂದ ಸೋತರೆ, ಎರಡನೇ ಪಂದ್ಯದಲ್ಲಿ ಕೇವಲ 157 ರನ್​ಗಳಿಸಲಷ್ಟೇ ಶಕ್ತವಾಗಿ 6 ವಿಕೆಟ್​ಗಳಿಂದ ಸೋಲುವ ಮೂಲಕ ಸರಣಿ ಕಳೆದುಕೊಂಡಿದೆ.

ಮೂರನೇ ಪಂದ್ಯ ನಾಳೆ ಸೌತಾಂಪ್ಟನ್​ನಲ್ಲಿ ನಡೆಯಲಿದೆ. ನಂತರ ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್​ ​ 8ರಂದು ಸೌತಾಂಪ್ಟನ್​ ನಲ್ಲಿ ನಡೆಯಲಿದೆ. ನಂತರ ಮೂರು ಏಕದಿನ ಪಂದ್ಯಗಳು ಮ್ಯಾಂಚೆಸ್ಟರ್​ನಲ್ಲಿ ಸೆಪ್ಟೆಂಬರ್​ 11, 13, ಹಾಗೂ 16ರಂದು ನಡೆಯಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.