ETV Bharat / sports

ಐಪಿಎಲ್​ ಪ್ಲೇ ಆಫ್​ನಲ್ಲಿ ಕಳಪೆ ದಾಖಲೆ ಬರೆದ ರೋಹಿತ್ ಶರ್ಮಾ

ಗಾಯದಿಂದ ಚೇತರಿಸಿಕೊಂಡು ಬಂದಿರುವ ರೋಹಿತ್ ಶರ್ಮಾ ಬ್ಯಾಟಿಂಗ್ ಲಯ ಕಳೆದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಕೇವಲ 4 ರನ್​ಗಳಿಗೆ ಔಟ್​ ಆಗಿದ್ದರು. ಇಂದಿನ ಪಂದ್ಯದಲ್ಲಾದರೂ ಫಾರ್ಮ್​ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ರೋಹಿತ್ ನಿರಾಶೆ ಮೂಡಿಸಿದ್ದಾರೆ. ತಾವು ಎದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು.

ರೋಹಿತ್ ಶರ್ಮಾ ಡಕ್​ ಔಟ್​
ರೋಹಿತ್ ಶರ್ಮಾ ಡಕ್​ ಔಟ್​
author img

By

Published : Nov 5, 2020, 8:19 PM IST

ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗುರುವಾರ ದುಬೈನಲ್ಲಿ ನಡೆಯುತ್ತಿರುವ ಡೆಲ್ಲಿ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ ಡಕ್​ ಔಟ್ ಆಗುವ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟ್ಸ್​ಮನ್​ ಎಂಬ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ.

ಗಾಯದಿಂದ ಚೇತರಿಸಿಕೊಂಡು ಬಂದಿರುವ ರೋಹಿತ್ ಶರ್ಮಾ ಬ್ಯಾಟಿಂಗ್ ಲಯ ಕಳೆದುಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಕೇವಲ 4 ರನ್​ಗಳಿಗೆ ಔಟ್​ ಆಗಿದ್ದರು. ಇಂದಿನ ಪಂದ್ಯದಲ್ಲಾದರೂ ಫಾರ್ಮ್​ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ರೋಹಿತ್ ನಿರಾಶೆ ಮೂಡಿಸಿದ್ದಾರೆ. ತಾವು ಎದುರಿಸಿದ ಮೊದಲ ಎಸೆತದಲ್ಲೇ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು.

ಈ ಪಂದ್ಯದಲ್ಲಿ ಡಕ್​ ಔಟ್ ಆಗುವ ಮೂಲಕ ಹಿಟ್​ಮ್ಯಾನ್​ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್​ ಔಟ್​ ಆದ ಬ್ಯಾಟ್ಸ್​ಮನ್ ಎಂಬ ಬೇಡದ ದಾಖಲೆಯನ್ನ ಹರ್ಭಜನ್ ಸಿಂಗ್ ಮತ್ತು ಪಾರ್ಥೀವ್ ಪಟೇಲ್​ ಜೊತೆ ಹಂಚಿಕೊಂಡಿದ್ದಾರೆ. ಈ ಮೂವರು ಬ್ಯಾಟ್ಸ್​ಮನ್​ಗಳು ಐಪಿಎಲ್​ನಲ್ಲಿ 13 ಬಾರಿ ಡಕ್​ ಔಟ್​ ಆಗಿದ್ದಾರೆ. ಈ ಪಟ್ಟಿಯಲ್ಲಿ ಮನೀಶ್ ಪಾಂಡೆ, ಪಿಯೂಷ್ ಚಾವ್ಲಾ, ರಾಯುಡು, ಮಂದೀಪ್ ಸಿಂಗ್, ಗಂಭೀರ್, ರಹಾನೆ, ದಿನೇಶ್​ ಕಾರ್ತಿಕ್ ತಲಾ 12 ಬಾರಿ ಡಕ್​ ಔಟ್​ ಆಗಿದ್ದಾರೆ.

ಇದರ ಜೊತೆಗೆ ರೋಹಿತ್ ಶರ್ಮಾ ಪ್ಲೇ ಆಫ್​ ಪಂದ್ಯಗಳಲ್ಲಿ ತಮ್ಮ ವೈಫಲ್ಯವನ್ನು ಮುಂದುವರೆಸಿದ್ದಾರೆ. ರೋಹಿತ್ ಪ್ಲೇ ಆಫ್​ನ 19 ಪಂದ್ಯಗಳಲ್ಲಿ 12.75ರ ಸರಾಸರಿಯಲ್ಲಿ 101.3 ಸ್ಟ್ರೈಕ್​ರೇಟ್​ನಲ್ಲಿ 229 ರನ್ ​ಗಳಿಸಿದ್ದಾರೆ. ಇದರಲ್ಲಿ 3 ಬಾರಿ ಡಕ್ ​ಔಟ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.