ಮುಂಬೈ: ಮುಂಬರುವ ವಿಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ಇವತ್ತು ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸಿದ್ದ ಪ್ರತಿಭಾವಂತ ಆಟಗಾರ ಕನ್ನಡಿಗ ಮಯಾಂಕ್ ಅಗರವಾಲ್ ಅವರನ್ನು ಕೈ ಬಿಡಲಾಗಿದೆ.
ಲಿಸ್ಟ್ ಎ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕಳೆದೆರಡು ವರ್ಷಗಳಿಂದ ಭರ್ಜರಿ ರನ್ ಕಲೆಹಾಕುತ್ತಿರುವ ಮಯಾಂಕ್ ಅಗರವಾಲ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ನಂತರ 2019ರ ವಿಶ್ವಕಪ್ನಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಪರಿಶ್ರಮಕ್ಕೆ ಮನ್ನಣೆ ನೀಡಲಾಗಿತ್ತು. ಆದರೆ, ವಿಶ್ವಕಪ್ನಲ್ಲಿ ಆಡುವ ಅವಕಾಶ ನೀಡಲಿಲ್ಲವಾದರೂ ನಂತರದ ದಿನಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅವಕಾಶ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು.
75 ಲಿಸ್ಟ್ 'ಎ' ಪಂದ್ಯ ಆಡಿರುವ ಮಯಾಂಕ್ 48.71ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 3,605 ರನ್ ಬಾರಿಸಿದ್ದಾರೆ. ಇದರಲ್ಲಿ ಇವರ ಗರಿಷ್ಠ ರನ್ 176. ಇದರಲ್ಲಿ 12 ಅರ್ಧಶತಕ ಮತ್ತು 14 ಶತಕ ಸಿಡಿಸಿದ್ದಾರೆ. ದೇಶಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ, ಒಂದೂ ಪಂದ್ಯದಲ್ಲೂ ಆಡುವ ತಂಡದಲ್ಲಿ ಅವಕಾಶ ನೀಡದೆ ಏಕದಿನ ತಂಡದಲ್ಲಿ ಪರಿಗಣಿಸದಿರುವುದು ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಮಯಾಂಕ್ ಆಡಿದ 2 ಪಂದ್ಯಗಳಿಂದ 195 ರನ್ ಗಳಿಸಿದ್ದರು.