ETV Bharat / sports

ಮ್ಯಾಕ್ಸ್​ವೆಲ್​-ಕ್ಯಾರಿ ದ್ವಿಶತಕದಾಟ... ಇಂಗ್ಲೆಂಡ್​ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದ ಕಾಂಗರೂ ಪಡೆ - ಗ್ಲೇನ್​ ಮ್ಯಾಕ್ಸ್​ವೆಲ್​

ಸರಣಿ ಗೆಲ್ಲಲು ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದ್ದ ಮೂರನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಗ್ಲೇನ್​ ಮ್ಯಾಕ್ಸ್​ವೆಲ್​ ಹಾಗೂ ಕ್ಯಾರಿ ಆರ್ಭಟಕ್ಕೆ ಇಂಗ್ಲೆಂಡ್​ ಸರಣಿ ಕೈಚೆಲ್ಲಿದೆ.

Maxwell, carey
Maxwell, carey
author img

By

Published : Sep 17, 2020, 3:16 AM IST

ಮ್ಯಾಂಚೆಸ್ಟರ್​: ಆಸ್ಟ್ರೇಲಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ ಅಲೆಕ್ಸ್​ ಕ್ಯಾರಿ(106) ಹಾಗೂ ಗ್ಲೇನ್​ ಮ್ಯಾಕ್ಸ್​ವೆಲ್​​​(108)ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ವಿಶ್ವ ಚಾಂಪಿಯನ್​ ಇಂಗ್ಲೆಂಡ್​ ಮೇಲೆ ಸವಾರಿ ನಡೆಸಿದ ಕಾಂಗರೂ ಪಡೆ ಮೂರು ಏಕದಿನ ಪಂದ್ಯಗಳ ಸರಣಿಯನ್ನ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.

England vs Australia
ಆಸ್ಟ್ರೇಲಿಯಾ ಸಂಭ್ರಮ

ಎಮಿರೇಟ್ಟ್​​ ಓಲ್ಡ್​​ ಟ್ರಾಫರ್ಡ್​​ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ತಂಡ ಆರಂಭಿಕ ಆಘಾತದ ನಡುವೆ ಕೂಡ ಬ್ಯಾರಿಸ್ಟೋ 112ರನ್​, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಬಿಲ್ಲಿಂಗ್ಸ್​​(57) ಹಾಗೂ ಕ್ರೀಸ್​ ವೋಕ್ಸ್​(53)ರನ್​ಗಳ ಸಹಾಯದಿಂದ ನಿಗದಿತ 50 ಓವರ್​​ಗಳಲ್ಲಿ 7 ವಿಕೆಟ್​ ಕಳೆದುಕೊಂಡು ಸ್ಪರ್ಧಾತ್ಮಕ 302ರನ್​ಗಳಿಕೆ ಮಾಡಿತು.

England vs Australia
ಬ್ಯಾರಿಸ್ಟೋ ಶತಕದಾಟ

ಆರಂಭಿಕರಾಗಿ ಕಣಕ್ಕಿಳಿದ ರಾಯ್​(0) ಹಾಗೂ ರೂಟ್​(0) ಖಾತೆ ತೆರೆಯದೇ ಪೆವಿಲಿಯನ್​ ಸೇರಿಕೊಂಡರು. ಆಸ್ಟ್ರೇಲಿಯಾ ಪರ ಸ್ಟಾರ್ಕ್​​​, ಜಂಪಾ ತಲಾ 3ವಿಕೆಟ್​ ಪಡೆದರೆ ಕುಮ್ಮಿನ್ಸ್​ 1ವಿಕೆಟ್​ ಪಡೆದುಕೊಂಡರು.

England vs Australia
ಬಿಲ್ಲಿಂಗ್ಸ್ ಬ್ಯಾಟಿಂಗ್​​

303ರನ್​ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 73ರನ್​ಗಳಿಕೆ ಮಾಡುವಷ್ಟರಲ್ಲಿ ಆರಂಭಿಕ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ಸರಣಿ ಕೈಚೆಲ್ಲುವ ಹಂತಕ್ಕೆ ಬಂದು ನಿಂತಿತ್ತು. ಆರಂಭದಲ್ಲೇ ವಾರ್ನರ್​(24), ಫಿಂಚ್​(12), ಸ್ಟೋನಿಸ್​​​​(4),ಮಾರ್ನೂಸ್​​​(20) ಹಾಗೂ ಮಿಚಲ್​ ಮಾರ್ಸ್​​​​(2)ರನ್​ಗಳಿಕೆ ಮಾಡಿ ನಿರಾಸೆ ಮೂಡಿಸಿದರು.

England vs Australia
ವಾರ್ನರ್​ ವಿಕೆಟ್​​

ಈ ವೇಳೆ ಒಂದಾದ ವಿಕೆಟ್​ ಕೀಪರ್​​ ಅಲೆಕ್ಸ್​ ಕ್ಯಾರಿ ಹಾಗೂ ಆಲ್​ರೌಂಡರ್​ ಗ್ಲೇನ್​ ಮ್ಯಾಕ್ಸ್​ವೆಲ್​ ತಂಡದ ಜವಾಬ್ದಾರಿ ಹೊತ್ತುಕೊಂಡು ಸಮಯೋಚಿತ ಬ್ಯಾಟಿಂಗ್​ ನಡೆಸಿದರು. 212ರನ್​ಗಳ ಜೊತೆಯಾಟ ಆಡುವ ಮೂಲಕ ಇಬ್ಬರು ಶತಕ ಸಿಡಿಸಿ ಮಿಂಚಿದರು. ಕ್ಯಾರಿ (106) ಮ್ಯಾಕ್ಸ್​ವೆಲ್​​(108)ರನ್​ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು.

England vs Australia
ಆಸ್ಟ್ರೇಲಿಯಾ ಬ್ಯಾಟಿಂಗ್​

ಇವರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಕಮ್ಮಿನ್ಸ್​ ಅಜೇಯ 4ರನ್​ಹಾಗೂ ಸ್ಟಾರ್ಕ್​​ 11ರನ್​ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ತಂಡ ಕೊನೆಯದಾಗಿ 49.4 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 305ರನ್​ಗಳಿಕೆ ಮಾಡಿ ಜಯದ ನಗೆ ಬೀರಿತು. ಜತೆಗೆ ಸರಣಿಯಲ್ಲಿ 2-1 ಅಂತರದ ಗೆಲುವು ದಾಖಲು ಮಾಡಿತು.

England vs Australia
ಫಿಂಚ್​ ವಿಕೆಟ್​ ಪಡೆದ ಸಂಭ್ರಮ

ಸಂಕ್ಷಿಪ್ತ ವಿವರ

ಇಂಗ್ಲೆಂಡ್​​: 302/7, ಬ್ಯಾರಿಸ್ಟೋ 112ರನ್​

ಆಸ್ಟ್ರೇಲಿಯಾ 305/7, ಕ್ಯಾರಿ 106ರನ್​, ಮ್ಯಾಕ್ಸ್​ವೆಲ್​​ 108ರನ್​

2-1 ಅಂತರದಲ್ಲಿ ಸರಣಿ ಗೆದ್ದ ಆಸ್ಟ್ರೇಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.