ETV Bharat / sports

ಟಿ-20 ಕ್ರಿಕೆಟ್​​ನಲ್ಲಿ ಗರಿಷ್ಠ ಸಿಕ್ಸರ್​: ರೋಹಿತ್ ದಾಖಲೆ ಬ್ರೇಕ್​ ಮಾಡಿದ ಗಪ್ಟಿಲ್​

author img

By

Published : Feb 25, 2021, 4:03 PM IST

ಮಾರ್ಟಿನ್ ಗಪ್ಟಿಲ್​ 50 ಎಸೆತಗಳಲ್ಲಿ 8 ಸಿಕ್ಸರ್​ ಮತ್ತು 6 ಬೌಂಡರಿ ಸಹಿತ 97 ರನ್​ಗಳಿಸಿ ತಂಡ 219 ರನ್​ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಪ್ರತಿ ಹೋರಾಟ ನಡೆಸಿದ ಆಸ್ಟ್ರೇಲಿಯಾ 215 ರನ್​ಗಳಿಸಿ ​ಕೇವಲ 4 ರನ್​ಗಳಿಂದ ಸೋಲು ಕಂಡಿತ್ತು.

ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​
ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​

ಡುನೆಡಿನ್​: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭರ್ಜರಿ 8 ಸಿಕ್ಸರ್​ ಸಿಡಿಸಿದ ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಮಾರ್ಟಿನ್​ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಮಾರ್ಟಿನ್ ಗಪ್ಟಿಲ್​ 50 ಎಸೆತಗಳಲ್ಲಿ 8 ಸಿಕ್ಸರ್​ ಮತ್ತು 6 ಬೌಂಡರಿ ಸಹಿತ 97 ರನ್​ಗಳಿಸಿ ತಂಡ 219 ರನ್​ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಪ್ರತಿ ಹೋರಾಟ ನಡೆಸಿದ ಆಸ್ಟ್ರೇಲಿಯಾ 215 ರನ್​ಗಳಿಸಿ ​ಕೇವಲ 4 ರನ್​ಗಳಿಂದ ಸೋಲು ಕಂಡಿತ್ತು.

With 97 from just 50 balls in Dunedin @Martyguptill is @ANZ_NZ Player of the Match. Guptill donated his $500 from ANZ to his lifelong @aucklandcricket club Suburbs New Lynn #NZvAUS pic.twitter.com/6RQK4kSzu2

— BLACKCAPS (@BLACKCAPS) February 25, 2021

ಈ ಪಂದ್ಯದಲ್ಲಿ 8 ಸಿಕ್ಸರ್​​ ಸಿಡಿಸಿದ ಗಪ್ಟಿಲ್​ ಭಾರತ ತಂಡದ ರೋಹಿತ್ ಶರ್ಮಾರ ಗರಿಷ್ಠ ಸಿಕ್ಸರ್​ ದಾಖಲೆಯನ್ನು ಮುರಿದರು. ಗಪ್ಟಿಲ್​ 96 ಟೆಸ್ಟ್​ ಪಂದ್ಯಗಳಲ್ಲಿ 132 ಸಿಕ್ಸರ್​ ಸಿಡಿಸಿದ್ದರೆ, ರೋಹಿತ್ ಶರ್ಮಾ 108 ಪಂದ್ಯಗಳಲ್ಲಿ 127 ಸಿಕ್ಸರ್​ ಸಿಡಿಸಿ 2ನೇ ಸ್ಥಾನ ಪಡೆದಿದ್ದಾರೆ.

ಇವರಿಬ್ಬರನ್ನು ಹೊರತುಪಡಿಸಿದರೆ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್​ 97 ಪಂದ್ಯಗಳಲ್ಲಿ 113 , ಕಿವೀಸ್​ನ ಕಾಲಿನ್ ಮನ್ರೋ 65 ಪಂದ್ಯಗಳಲ್ಲಿ 107 , ಕ್ರಿಸ್​ ಗೇಲ್​ 58 ಪಂದ್ಯಗಳಿಂದ 105 ಸಿಕ್ಸರ್​ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 100 ಸಿಕ್ಸರ್​ ಗಡಿದಾಟಿರುವ ಬ್ಯಾಟ್ಸ್​ಮನ್​ಗಳಾಗಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ 4 ರನ್​ಗಳ ರೋಚಕ ಜಯ ಸಾಧಿಸಿದ ನ್ಯೂಜಿಲ್ಯಾಂಡ್

ಡುನೆಡಿನ್​: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭರ್ಜರಿ 8 ಸಿಕ್ಸರ್​ ಸಿಡಿಸಿದ ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಮಾರ್ಟಿನ್​ ಗಪ್ಟಿಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಮಾರ್ಟಿನ್ ಗಪ್ಟಿಲ್​ 50 ಎಸೆತಗಳಲ್ಲಿ 8 ಸಿಕ್ಸರ್​ ಮತ್ತು 6 ಬೌಂಡರಿ ಸಹಿತ 97 ರನ್​ಗಳಿಸಿ ತಂಡ 219 ರನ್​ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು. ಪ್ರತಿ ಹೋರಾಟ ನಡೆಸಿದ ಆಸ್ಟ್ರೇಲಿಯಾ 215 ರನ್​ಗಳಿಸಿ ​ಕೇವಲ 4 ರನ್​ಗಳಿಂದ ಸೋಲು ಕಂಡಿತ್ತು.

ಈ ಪಂದ್ಯದಲ್ಲಿ 8 ಸಿಕ್ಸರ್​​ ಸಿಡಿಸಿದ ಗಪ್ಟಿಲ್​ ಭಾರತ ತಂಡದ ರೋಹಿತ್ ಶರ್ಮಾರ ಗರಿಷ್ಠ ಸಿಕ್ಸರ್​ ದಾಖಲೆಯನ್ನು ಮುರಿದರು. ಗಪ್ಟಿಲ್​ 96 ಟೆಸ್ಟ್​ ಪಂದ್ಯಗಳಲ್ಲಿ 132 ಸಿಕ್ಸರ್​ ಸಿಡಿಸಿದ್ದರೆ, ರೋಹಿತ್ ಶರ್ಮಾ 108 ಪಂದ್ಯಗಳಲ್ಲಿ 127 ಸಿಕ್ಸರ್​ ಸಿಡಿಸಿ 2ನೇ ಸ್ಥಾನ ಪಡೆದಿದ್ದಾರೆ.

ಇವರಿಬ್ಬರನ್ನು ಹೊರತುಪಡಿಸಿದರೆ, ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್​ 97 ಪಂದ್ಯಗಳಲ್ಲಿ 113 , ಕಿವೀಸ್​ನ ಕಾಲಿನ್ ಮನ್ರೋ 65 ಪಂದ್ಯಗಳಲ್ಲಿ 107 , ಕ್ರಿಸ್​ ಗೇಲ್​ 58 ಪಂದ್ಯಗಳಿಂದ 105 ಸಿಕ್ಸರ್​ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ 100 ಸಿಕ್ಸರ್​ ಗಡಿದಾಟಿರುವ ಬ್ಯಾಟ್ಸ್​ಮನ್​ಗಳಾಗಿದ್ದಾರೆ.

ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ 4 ರನ್​ಗಳ ರೋಚಕ ಜಯ ಸಾಧಿಸಿದ ನ್ಯೂಜಿಲ್ಯಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.