ETV Bharat / sports

ಗಾಯಗೊಂಡಿದ್ದ ವೇಗದ ಬೌಲರ್​​ ಫಿಟ್...​ ಗೆಲುವಿನ ಹಳಿಗೆ ಮರಳಿದ ಆಫ್ರಿಕಾಕ್ಕೆ ಸಿಹಿ ಸುದ್ದಿ

author img

By

Published : Jun 18, 2019, 1:25 PM IST

3 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿರುವ ಆಫ್ರಿಕಾ ತಂಡ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಯುತ್ತಿದ್ದು, ಈ ಪಂದ್ಯಕ್ಕೆ ಲುಂಗಿ ಎನ್​ಗಿಡಿ ತಂಡ ಸೇರಿಕೊಳ್ಳಲಿದ್ದಾರೆ.

Lungi Ngidi

ಲಂಡನ್​: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಲುಂಗಿ ಎನ್​ಗಿಡಿ ಫಿಟ್​ ಆಗಿದ್ದು, ಟೂರ್ನಿಯಲ್ಲಿ 3 ಸೋಲಕಂಡು ಸಂಕಷ್ಟದಲ್ಲಿರುವ ಹರಿಣ ಪಡೆಗೆ ಆನೆ ಬಲ ಬಂದಂತಾಗಿದೆ.

5 ಪಂದ್ಯಗಳಿಂದ 1 ಗೆಲುವು 3 ಸೋಲು ಕಂಡಿದ್ದ ಪ್ಲೆಸಿಸ್​ ಪಡೆಗೆ ಮಳೆಯಿಂದಾಗಿ ವಿಂಡೀಸ್​ ವಿರುದ್ಧದ ಪಂದ್ಯ ರದ್ದಾಗಿತ್ತು. 3 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿರುವ ಆಫ್ರಿಕಾ ತಂಡ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಯುತ್ತಿದ್ದು, ಈ ಪಂದ್ಯಕ್ಕಾಗಿ ಲುಂಗಿ ಎನ್​ಗಿಡಿ ತಂಡ ಸೇರಿಕೊಳ್ಳಲಿದ್ದಾರೆ.

ದ.ಆಫ್ರಿಕಾ ತಂಡ ಮುಂದಿನ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯ, ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಸೆಣಸಾಡಲಿದ್ದು, ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ನಿನ್ನೆ ನಡೆದ ಫಿಟ್​ನೆಸ್​ ಪರೀಕ್ಷೆಯಲ್ಲಿ ಎನ್​ಗಿಡಿ ಉತ್ತೀರ್ಣರಾಗಿದ್ದು, ತಾವೂ ಸಂಪೂರ್ಣ ಫಿಟ್​ ಆಗಿದ್ದು, ತಂಡ ಬಯಸಿದಂತೆ ಪ್ರದರ್ಶನ ನೀಡಲು ಸಿದ್ದನಿದ್ದೇನೆ. ನಮ್ಮ ಮುಂದೆ, ಮುಂಬರುವ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ಇದೆ. ಮುಂದಿನ ಪಂದ್ಯದಲ್ಲಿ ಕಿವೀಸ್​ ಎದುರಾಳಿಯಾಗಿದ್ದು, ತಮ್ಮ ಗೆಲುವಿನ ಓಟವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಎನ್​ಗಿಡಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.