ಲಾಹೋರ್(ಪಾಕಿಸ್ತಾನ): ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಸ್ಪಿನ್ನರ್ ಕುಲದೀಪ್ ಯಾದವ್ರನ್ನು ಪಾಕಿಸ್ತಾನ ಮಾಜಿ ಕ್ರಿಕೆಟರ್ ಸಕ್ಲೇನ್ ಮುಷ್ತಾಕ್ ಹಾಡಿ ಹೊಗಳಿದ್ದಾರೆ. ಕುಲ್ದೀಪ್ ಚುಟುಕು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದಾರೆ.
ಪಾಕ್ ಮಾಜಿ ಸ್ಪಿನ್ನರ್ ಮುಷ್ತಾಕ್ ಪ್ರಕಾರ ಕೊರೊನಾದಿಂದ ಪಂದ್ಯಾವಳಿಗಳು ರದ್ದಾಗುವ ಮೊದಲು ಕುಲ್ದೀಪ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರಂತೆ. ಆದರೆ ಕುಲದೀಪ್ ವಿಶಾಲ ಹೃದಯದ ಸಮರ್ಥ ಸ್ಪಿನ್ನರ್ ಎಂದು ಗುಣಗಾನ ಮಾಡಿದ್ದಾರೆ.
ಚುಟುಕು ಫಾರ್ಮೆಟ್ಗಳಲ್ಲಿ ಕುಲ್ದೀಪ್ ನಿಜಯಾವಗಿಯೂ ಒಬ್ಬ ಉತ್ತಮ ಸ್ಪಿನ್ನರ್. ಅವರ ಬಳಿ ನಾನು ಕೆಲವು ಬಾರಿ ಮಾತನಾಡಿದ್ದೇನೆ. ಈ ವೇಳೆ ನನಗೆ ಅವರು ತುಂಬಾ ಸುಶಿಕ್ಷಿತ ಕ್ರಿಕೆಟರ್ನಂತೆ ಕಂಡಿದ್ದಾರೆ. ಅಲ್ಲದೆ ಅವರ ವಿಶಾಲ ಮನೋಭಾವ ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಕುಲ್ದೀಪ್ ಈವರೆಗೆ 6 ಟೆಸ್ಟ್, 60 ಏಕದಿನ ಮತ್ತು 21 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಕ್ರಮವಾಗಿ 24, 104 ಹಾಗೂ 39 ವಿಕೆಟ್ಗಳನ್ನು ಪಡೆದಿದ್ದಾರೆ.
ಇದಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ತವರಿನ ಅಂಗಳದಲ್ಲಿ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅತ್ಯುತಮ ಸ್ಪಿನ್ನರ್ ಆಗಿದ್ದಾರೆ. ಆದರೆ ರವಿಚಂದ್ರನ್ ಅಶ್ವಿನ್ಗಿಂತಲೂ ಉತ್ತಮವಾದ ಸ್ವಿನ್ನರ್ ಈ ಜಗತ್ತಿನಲ್ಲಿಯೇ ಬೇರಾರು ಇಲ್ಲವೆಂದು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ. ತವರು ನೆಲದಲ್ಲಿ ಅಶ್ವಿನ್ ಒಬ್ಬ ಉತ್ತಮ ಆಟಗಾರ ಹಾಗೂ ರವೀಂದ್ರ ಜಡೇಜಾ ಕೂಡ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂದಿದ್ದಾರೆ.
ಇದಲ್ಲದೆ ಪಾಕಿಸ್ತಾನ ಟೆಸ್ಟ್ ಟೀಮ್ ನಾಯಕ ಬಾಬರ್ ಅಜಾಮ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಅಸಾಧ್ಯ ಎಂದಿದ್ದಾರೆ. ಬಾಬರ್ ಹೆಚ್ಚು ಶಾಂತ ಸ್ವಭಾವದ ವ್ಯಕ್ತಿ. ಅಲ್ಲದೆ ಇಬ್ಬರೂ ಉತ್ತಮ ಆಟಗಾರರೇ, ಪ್ರಬಲ ಎದುರಾಳಿಗಳು. ಇಬ್ಬರಲ್ಲೂ ಹೆಚ್ಚು ರನ್ ಗಳಿಸುವ ಉತ್ಸಾಹವಿದೆ ಎಂದಿದ್ದಾರೆ.