ETV Bharat / sports

ತಂದೆಗೆ ಶಸ್ತ್ರಚಿಕಿತ್ಸೆ... ಆರಂಭಿಕ ಐಪಿಎಲ್​​ನ ಕೆಲ ಪಂದ್ಯಗಳಿಂದ ಮುಂಬೈ ಸ್ಟಾರ್​ ಬೌಲರ್ ಹೊರಕ್ಕೆ​!?

author img

By

Published : Aug 21, 2020, 5:16 PM IST

ಮುಂಬೈ ಇಂಡಿಯನ್ಸ್​ ತಂಡದ ಸ್ಟಾರ್​ ಬೌಲರ್​ ಲಸಿತ್​ ಮಲಿಂಗಾ ಐಪಿಎಲ್​​ನ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Lasith malinga
Lasith malinga

ಕೊಲಂಬೊ: ಸೆಪ್ಟೆಂಬರ್​ 19ರಿಂದ ದುಬೈನಲ್ಲಿ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಲಿದ್ದು, ಈಗಾಗಲೇ ರಾಜಸ್ಥಾನ ರಾಯಲ್ಸ್​, ಪಂಜಾಬ್​, ಕೋಲ್ಕತ್ತಾ ಸೇರಿದಂತೆ ಅನೇಕ ತಂಡಗಳು ಅಲ್ಲಿಗೆ ಪ್ರಯಾಣ ಬೆಳೆಸಿವೆ.

ಮುಂಬೈ ಇಂಡಿಯನ್ಸ್​ ತಂಡ ಕೂಡ ಪ್ರಯಾಣ ಬೆಳೆಸಲಿದ್ದು, ಸೆಪ್ಟೆಂಬರ್​ 19ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಮೊದಲ ಪಂದ್ಯ ನಡೆಯಲಿದೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂಬೈ ತಂಡದ ಸ್ಟಾರ್​ ಬೌಲರ್​​ ಲಸಿತ್​ ಮಲಿಂಗಾ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮಲಿಂಗಾ ಅವರ ತಂದೆ ಅನಾರೋಗ್ಯಕ್ಕೊಳಗಾಗಿರುವ ಕಾರಣ ಅವರಿಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ಅವರು ತಂಡವನ್ನ ತಡವಾಗಿ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದೇಶದ ಜನ, ಪ್ರಧಾನಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಉತ್ತಮ ಮೆಚ್ಚುಗೆಯಿಲ್ಲ: ರೈನಾ

ಕಳೆದ ವರ್ಷ ಚೈನ್ನೈ ವಿರುದ್ಧ ನಡೆದ ಫೈನಲ್​ ಪಂದ್ಯದ ಫೈನಲ್​ ಓವರ್​ನಲ್ಲಿ 8 ರನ್​ ನೀಡದೇ ತಂಡದ ಗೆಲುವಿನಲ್ಲಿ ಮಲಿಂಗಾ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇಲ್ಲಿಯವರೆಗೂ ಮಲಿಂಗಾ ಐಪಿಎಲ್​​ನಲ್ಲಿ 122 ಪಂದ್ಯಗಳನ್ನಾಡಿದ್ದು, 170 ವಿಕೆಟ್​ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.