ETV Bharat / sports

ವಿಶ್ವ ಕ್ರಿಕೆಟ್​ನ​ ಒಳಿತಿಗಾಗಿ ಇಂಗ್ಲೆಂಡ್​ ಪ್ರವಾಸ, ಐಪಿಎಲ್​ ಬಹಳ ಮುಖ್ಯ: ಜಸ್ಟಿನ್​ ಲ್ಯಾಂಗರ್​ - ಇಂಗ್ಲೆಂಡ್​ ಪ್ರವಾಸಕ್ಕೆ ಆಸ್ಟ್ರೇಲಿಯ ಸಿದ್ದ

ಕೊರೊನಾ ವೈರಸ್‌ ಬೀತಿಯಿಂದ ಸುಮಾರು 117 ದಿನಗಳ ಕಾಲ ವಿಶ್ವದಲ್ಲಿ ಯಾವುದೇ ರೀತಿಯ ಕ್ರಿಕೆಟ್​ ನಡೆದಿಲ್ಲ. ಇದೀಗ ಜುಲೈ 8 ರಿಂದ ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ರೋಸ್​ಬೌಲ್​ನಲ್ಲಿ ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ ದೀರ್ಘಕಾಲದಿಂದ ನಿಂತಿದ್ದ ಕ್ರಿಕೆಟ್​ಗೆ ಪುನರಾರಂಭ ನೀಡಿವೆ.

ಜಸ್ಟಿನ್​ ಲ್ಯಾಂಗರ್​
ಜಸ್ಟಿನ್​ ಲ್ಯಾಂಗರ್​
author img

By

Published : Jul 9, 2020, 2:57 PM IST

ಸಿಡ್ನಿ: ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಬೇಕು ಹಾಗೂ ವಿಶ್ವದ ಸ್ಟಾರ್​ ಕ್ರಿಕೆಟಿಗರು ಐಪಿಎಲ್​ ನಲ್ಲಿ ಪಾಲ್ಗೊಳ್ಳಬೇಕು ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್​ ಜಸ್ಟಿನ್​ ಲ್ಯಾಂಗರ್​ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕ್ರಿಕೆಟ್​ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರವೆಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಬೀತಿಯಿಂದ ಸುಮಾರು 117 ದಿನಗಳ ಕಾಲ ವಿಶ್ವದಲ್ಲಿ ಯಾವುದೇ ರೀತಿಯ ಕ್ರಿಕೆಟ್ ಟೂರ್ನಿಗಳು​ ನಡೆದಿಲ್ಲ. ಇದೀಗ ಜುಲೈ 8 ರಿಂದ ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ರೋಸ್​ಬೌಲ್​ನಲ್ಲಿ ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ ದೀರ್ಘಕಾಲದಿಂದ ನಿಂತಿದ್ದ ಕ್ರಿಕೆಟ್​ಗೆ ಪುನರಾರಂಭ ನೀಡಿವೆ.

ನಾವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲೇ ಬೇಕಾಗಿದೆ. ಖಂಡಿತಾ, ಅಲ್ಲಿ ಸಾಕಷ್ಟು ಸವಾಲುಗಳಿವೆ. ಆದರೆ ಪ್ರವಾಸ ಸಾಧ್ಯವಾದರೆ ನಾವು ಪರಿಹಾರ ಕಂಡುಕೊಳ್ಳಬಹುದು ಎಂದು ಜಸ್ಟಿನ್ ಲ್ಯಾಂಗರ್ ವೆಬ್​ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಟಾಪ್​ ಕ್ರಿಕೆಟರ್​ಗಳು ಪಾಲ್ಗೊಳ್ಳುವುದರ ಬಗ್ಗೆ ಮಾತನಾಡಿರುವ ಲ್ಯಾಂಗರ್​, ಐಪಿಎಲ್ ಈ ವರ್ಷ ನಡೆದರೆ ಸಾಧ್ಯವಾದರೆ ಪ್ರಮುಖ ಆಟಗಾರರಿಗೆ ಅವಕಾಶ ಸಿಗಬೇಕು. ಜೊತೆಗೆ ದೇಸಿ ಕ್ರಿಕೆಟ್​ನಲ್ಲೂ ಆಸ್ಟ್ರೇಲಿಯಾ ಕ್ರಿಕೆಟಿಗರು ಪಾಲ್ಗೊಳ್ಳಬೇಕು ಎಂದಿದ್ದಾರೆ.

ಐಪಿಎಲ್​ ಇಲ್ಲದ 2020 ಮುಗಿಯಲು ನಾವು ಬಯಸುವುದಿಲ್ಲ. ಭಾರತದಲ್ಲೇ ಲೀಗ್​ ಪಂದ್ಯಗಳನ್ನು ನಡೆಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇಲ್ಲಿ ಅಸಾಧ್ಯವಾದರೆ ವಿದೇಶದಲ್ಲಿ ನಡೆಸುವ ಆಲೋಚನೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದರು. ಒಂದು ವೇಳೆ ಐಪಿಎಲ್​ ನಡೆದರೆ ಲೀಗ್​ನಲ್ಲಿ ಆಸ್ಟ್ರೇಲಿಯಾದ ಆಟಗಾರರಿಗೆ ಅವಕಾಶ ಒದಗಿಸಿಕೊಡಬೇಕು ಎಂದು ಲ್ಯಾಂಗರ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.