ಅಬುಧಾಬಿ: ವೆಸ್ಟ್ ಇಂಡೀಸ್ ತಂಡದ ಆ್ಯಂಡ್ರೆ ರಸೆಲ್ ವಿಶ್ವ ಟಿ20 ಕ್ರಿಕೆಟ್ನ ಡೈನಮಿಕ್ ಬ್ಯಾಟ್ಸ್ಮನ್. ಅವರು ಬ್ಯಾಟಿಂಗ್ ನಿಂತರೆ ಎದುರಾಳಿ ಬೌಲರ್ಗಳಿಗೆ ಖಂಡಿತ ನಡುಕ ಹುಟ್ಟುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್ 2020ರ ಐಪಿಎಲ್ನಲ್ಲೂ ಅದೇ ಸ್ಫೋಟಕ ಆಟವನ್ನು ನಿರೀಕ್ಷೆ ಮಾಡುತ್ತಿದೆ.
ಆದರೆ ಕೆಕೆಆರ್ನ ನಿರ್ಣಾಯಕ ಆಟಗಾರರಲ್ಲಿ ಒಬ್ಬರಾಗಿರುವ ಕುಲ್ದೀಪ್ ಯಾದವ್ ನೆಟ್ಸ್ನಲ್ಲಿ ರಸೆಲ್ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಏಕೆಂದರೆ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಹೊಡೆಯುವ ಚೆಂಡು ಕೆಲವೊಮ್ಮೆ ನೇರವಾಗಿ ಬೌಲರ್ ಬಳಿ ಬರುತ್ತದೆ. ಇದು ತಮಗೆ ಭಯ ತರಿಸುತ್ತದೆ ಎಂದಿದ್ದಾರೆ.
‘ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ರಸೆಲ್ಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಆತ ದೊಡ್ಡ ಹೊಡೆತಕ್ಕೆ ಪ್ರಯತ್ನಿಸುವಾಗ ನೀವು ಖಂಡಿತ ಭಯಭೀತರಾಗುತ್ತೀರಿ. ಒಂದು ವೇಳೆ ಅವರ ಹೊಡೆತ ತಪ್ಪಿದಲ್ಲಿ ಚೆಂಡು ನೇರವಾಗಿ ಬೌಲರ್ ಬಳಿ ಬರಲಿದೆ‘ ಎಂದು ಖಾಸಗಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಾತು ಮುಂದುವರಿಸಿ, ರಸೆಲ್ಗೆ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಬೇಕೆಂದರೆ ನಿಮಗೆ ಸಾಕಷ್ಟು ಅನುಭವವಿರಬೇಕು. ನಿಜಕ್ಕೂ ಆತ ಟಿ20 ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಅವರನ್ನು ನಮ್ಮ ತಂಡ ಹೊಂದಿರುವುದು ಅದೃಷ್ಟ ಎಂದಿದ್ದಾರೆ.
2010ರ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ರಸೆಲ್ ಗೆಲ್ಲಲು ಅಸಾಧ್ಯ ಎನಿಸಿಕೊಂಡಿದ್ದ ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಅವರು 14 ಪಂದ್ಯಗಳಲ್ಲಿ 56.66 ಸರಾಸರಿ ಹಾಗೂ 204ರ ಸ್ಟ್ರೈಕ್ರೇಟ್ನಲ್ಲಿ 510 ರನ್ ಸಿಡಿಸಿದ್ದರು. ಇದೀಗ ಕೆಕೆಆರ್ 3ನೇ ಐಪಿಎಲ್ಅನ್ನು ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಮತ್ತೆ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.