ETV Bharat / sports

ಅಭಿಷೇಕ್‌ ರೆಡ್ಡಿ, ಕಾರ್ತಿಕ್​ ಅರ್ಧಶತಕ.. ಬಳ್ಳಾರಿ ಟಸ್ಕರ್ಸ್​ಗೆ ಹ್ಯಾಟ್ರಿಕ್​ ಗೆಲುವು..

author img

By

Published : Aug 20, 2019, 7:11 PM IST

ಬಿಜಾಪುರ್​ ಬುಲ್ಸ್​ ವಿರುದ್ಧ ಅದ್ಭುತ ಬ್ಯಾಟಿಂಗ್​-ಬೌಲಿಂಗ್​ ಪ್ರದರ್ಶನ ತೋರಿದ ಬಳ್ಳಾರಿ ಟಸ್ಕರ್ಸ್​ ಹ್ಯಾಟ್ರಿಕ್​ ಜಯ ಸಾಧಿಸಿದೆ.

KPL 2019

ಬೆಂಗಳೂರು: ಬಿಜಾಪುರ್​ ಬುಲ್ಸ್​ ವಿರುದ್ಧ ಅದ್ಭುತ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಪ್ರದರ್ಶನ ತೋರಿದ ಬಳ್ಳಾರಿ ಟಸ್ಕರ್ಸ್​ ಹ್ಯಾಟ್ರಿಕ್​ ಜಯ ಸಾಧಿಸಿದೆ.

ಟಾಸ್​ಗೆದ್ದ ಟಸ್ಕರ್ಸ್​ ಬುಲ್ಸ್​ಗೆ ಬ್ಯಾಟಿಂಗ್​ ಆಹ್ವಾನಿಸಿ ಮೊದಲ ಓವರ್​ನಲ್ಲೇ ಯಶ ಸಾಧಿಸಿತು. 6 ಎಸೆತಗಳನ್ನೆದುರಿಸದ ನವೀನ್​ ಎಂ ಜಿ ಡಕ್​ ಔಟ್​ ಆದರು. ಆದರೆ, ಎರಡನೇ ವಿಕೆಟ್​ಗೆ ನಾಯಕ ಭರತ್​ ಚಿಪ್ಲಿ(50) ಹಾಗೂ ರಾಜು ಭಟ್ಕಳ್​(62) 84 ರನ್​ ಜೊತೆಯಾಟ ನಡೆಸಿದರು. ಚಿಪ್ಲಿ 39 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್​ ಸಹಿತ 50 ರನ್​ಗಳಿಸಿದರೆ, ಭಟ್ಕಳ್​ 43 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್​ ಸಹಿತ 62 ರನ್​ಗಳಿಸಿದರು.

ಆದರೆ, ಇವರಿಬ್ಬರ ವಿಕೆಟ್​ ನಂತರ ಬುಲ್ಸ್​ ರನ್​ಗಳಿಸಲು ಪರದಾಡಿತು. 20 ಓವರ್​ಗಳಲ್ಲಿ7 ವಿಕೆಟ್​ ಕಳೆದುಕೊಂಡು 162 ರನ್​ಗಳಿಸಿತು. ಉತ್ತಮ ಬೌಲಿಂಗ್​ ದಾಳಿ ನಡೆಸಿದ ಕೆ ಗೌತಮ್​ 3 ವಿಕೆಟ್​, ಪ್ರಸಿದ್​ ಕೃಷ್ಣ 2, ಕಾರ್ತಿಕ್​ ಒಂದು ವಿಕೆಟ್​ ಪಡೆದು ಮಿಂಚಿದರು. 163 ರನ್​ಗಳ ಗುರಿ ಪಡೆದ ಟಸ್ಕರ್ಸ್​ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್​ ನಡೆಸಿತು. ಆರಂಭಿಕರಾದ ಅಭಿಷೇಕ್​ ರೆಡ್ಡಿ ಔಟಾಗದೆ 62, ಕಾರ್ತಿಕ್​ ಸಿಎ 57 ಹಾಗೂ ದೇವದತ್​ ಪಡಿಕ್ಕಲ್​ 29 ರನ್​ಗಳಿಸಿ ಗೆಲುವಿನ ರೂವಾರಿ ಯಾದರು. ಔಟಾಗದೆ 62 ರನ್​ಗಳಿಸಿದ ಅಭಿಶೇಕ್​ ರೆಡ್ಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.