ETV Bharat / sports

'ವಿರಾಟ್​ ಕೊಹ್ಲಿ ಒಬ್ಬರೇ ಹನ್ನೊಂದು ಆಟಗಾರರಿಗೆ ಸಮ': ಸಕ್ಲೇನ್​ ಮುಷ್ತಾಕ್

ನಂ. 1 ಬ್ಯಾಟ್ಸ್‌ಮನ್ ಆದವರು ಅಹಂಕಾರವನ್ನು ಹೊಂದಿರುತ್ತಾರೆ. ನೀವು ಅಂತವರಿಗೆ ಡಾಟ್ ಬಾಲ್ ಎಸೆದರೆ ಅದರಿಂದ ಅವಮಾನದ ಅನುಭವವಾಗುತ್ತೆ. ಬೌಲರ್‌ಗಳು ತಾಳ್ಮೆಯಿಂದ ಗಮನಿಸಿ, ಮುಂದಿನ ಎಸೆತಗಳನ್ನು ಪ್ರಯೋಗಿಸಬೇಕು ಎಂದು ಬೌಲರ್​ಗಳಿಗೆ ಸಲಹೆ ನೀಡಿದ್ದಾಗಿ ಸಕ್ಲೇನ್​ ಮುಷ್ತಾಕ್​ ಹೇಳಿಕೊಂಡಿದ್ದಾರೆ.

Saqlain Mushtaq
ಸಕ್ಲೇನ್​ ಮುಷ್ತಾಕ್
author img

By

Published : Jun 13, 2020, 6:27 AM IST

ಹೈದರಾಬಾದ್​: ಭಾರತ ಕ್ರಿಕೆಟ್​ ತಂಡದ ನಾಯಕ 'ವಿರಾಟ್​ ಕೊಹ್ಲಿ ಒಬ್ಬರೇ ಹನ್ನೊಂದು 11 ಆಟಗಾರರಿಗೆ ಸಮ' ಎಂದು ಪಾಕಿಸ್ತಾನ ಮಾಜಿ ಆಟಗಾರ, ಸ್ಪಿನ್​ ದಿಗ್ಗಜ ಸಕ್ಲೇನ್​ ಮುಷ್ತಾಕ್​ ಅವರು ಇಂಗ್ಲೆಂಡ್​​ನ ಸ್ಪಿನ್‌ ಜೋಡಿಯಾದ ಆದಿಲ್ ರಶೀದ್ ಹಾಗೂ ಮೋಯಿನ್ ಅಲಿಗೆ ಹೇಳಿದ್ದರಂತೆ...

ಕಳೆದ ವರ್ಷ ನಡೆದ ವಿಶ್ವಕಪ್​ನವರೆಗೆ ಮುಷ್ತಾಕ್​ ​​ಇಂಗ್ಲೆಂಡ್‌ ಟೀಂನ ಸ್ಪಿನ್ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಕೊಹ್ಲಿ ಬ್ಯಾಟಿಂಗ್​ ಸಾಮರ್ಥ್ಯ ಹಾಗೂ ವಿಕೆಟ್​ ಪಡೆಯುವ ಬಗ್ಗೆ ಆಂಗ್ಲ ಸ್ಪಿನ್ನರ್​ಗಳಿಗೆ ಅಗತ್ಯ ನೀಡಿದ್ದರು. ಇದುವರೆಗೆ ಮೊಯೀನ್ ಮತ್ತು ರಶೀದ್ ಕೊಹ್ಲಿಯನ್ನು ತಲಾ ಆರು ಬಾರಿ ಔಟ್​ ಮಾಡಿದ್ದಾರೆ.

ಖ್ಯಾತ ಕ್ರೀಡಾ ವಿಶ್ಲೇಷಕ ನಿಖಿಲ್​ ನಾಜ್​ ಜೊತೆಗಿನ ಇನ್​ಸ್ಟಾಗ್ರಾಂ ಲೈವ್​​ನಲ್ಲಿ ಮುಷ್ತಾಕ್, ಕೊಹ್ಲಿ ಬಗ್ಗೆ ತಾವು ಸಲಹೆ ನೀಡಿದ್ದ​ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಓರ್ವ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗೆ ಬೌಲಿಂಗ್​ ಮಾಡುವಾಗ ಬೌಲರ್​ ಮನಸ್ಸಿನಲ್ಲಿ ಸ್ಪಷ್ಟತೆ ಇರಬೇಕು. ಅಂತಹ ಬ್ಯಾಟ್ಸ್​ಮನ್​ಗೆ ಯಾರೇ ಬೌಲಿಂಗ್​ ಮಾಡಿದರೂ ಸಮರ್ಥವಾಗಿ ಎದುರಿಸಬಲ್ಲ. ಎದುರಾಳಿ ಬೌಲರ್​ ಎಡಗೈ ಸ್ಪಿನ್ನರ್​, ಲೆಗ್​ ಅಥವಾ ಆಫ್​ ಸ್ಪಿನ್ನರ್ ಎಂಬ ಯಾವುದೇ ಬದಲಾವಣೆ ಆತನಿಗೆ ಅನಿಸೋದಿಲ್ಲ ಎಂಬುದು ಮುಷ್ತಾಕ್​ ಮಾತು.

ಆದರೆ ಇಡೀ ಜಗತ್ತು ಕೊಹ್ಲಿಯನ್ನ ಗಮನಿಸುತ್ತಿರುವುದರಿಂದ ನಿಮಗಿಂತ ವಿರಾಟ್​ ಮೇಲೆ ಒತ್ತಡ ಹೆಚ್ಚಿರುತ್ತದೆ ಎಂಬುದನ್ನ ನೀವು ಅರಿತಿರಬೇಕು ಎಂದೂ ಕೂಡ ತಾನು ಸಲಹೆ ನೀಡಿದ್ದಾಗಿ ಮುಷ್ತಾಕ್​ ಹೇಳಿದ್ದಾರೆ.

2018ರಲ್ಲಿ ಹೆಡಿಂಗ್ಲಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆದಿಲ್​​ ರಶೀದ್, ಕೊಹ್ಲಿ ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದ್ದರು. ಲೆಗ್‌ಸ್ಟಂಪ್‌ಗೆ ನೇರವಾಗಿ ಎಸೆದಿದ್ದ ಚೆಂಡು ಮೊನಚಾದ ತಿರುವು ಪಡೆದು ಆಫ್‌ಸ್ಟಂಪ್​ಗೆ ತಗುಲಿತ್ತು. ಆ ಚೆಂಡನ್ನು ‘ವಿರಾಟ್ ವಾಲಾ ಎಸೆತ’ ಎಂದು ನಾನು ಹೆಸರಿಸಿದ್ದೆ. ಅದೇ ರೀತಿಯ ಎಸೆತಗಳನ್ನು ನೆಟ್ಸ್‌ನಲ್ಲಿ ಹೆಚ್ಚು ಅಭ್ಯಾಸ ಮಾಡುವಂತೆ ರಶೀದ್‌ಗೆ ಸಲಹೆ ನೀಡಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ನಂ. 1 ಬ್ಯಾಟ್ಸ್‌ಮನ್ ಆದವರು ಅಹಂಕಾರವನ್ನು ಹೊಂದಿರುತ್ತಾರೆ. ನೀವು ಅಂತವರಿಗೆ ಡಾಟ್ ಬಾಲ್ ಎಸೆದರೆ ಅದರಿಂದ ಅವಮಾನದ ಅನುಭವವಾಗುತ್ತೆ. ಬೌಲರ್‌ಗಳು ತಾಳ್ಮೆಯಿಂದ ಗಮನಿಸಿ, ಮುಂದಿನ ಎಸೆತಗಳನ್ನು ಪ್ರಯೋಗಿಸಬೇಕು ಎಂದು ಸಲಹೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.