ETV Bharat / sports

ಮತ್ತೊಂದು ದಾಖಲೆ ಬರೆದ ಕೊಹ್ಲಿ... ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ! - ಟೀಂ ಇಂಡಿಯಾ ಕ್ಯಾಪ್ಟನ್​

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸದ್ಯ ಮತ್ತೊಂದು ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಕ್ರೀಡಾ​​ ವಲಯದಲ್ಲಿ ಈ ರೆಕಾರ್ಡ್​ ಬರೆದ ಭಾರತದ ಮೊದಲ ಪ್ಲೇಯರ್​​ ಆಗಿದ್ದಾರೆ.

Kohli
Kohli
author img

By

Published : Jul 27, 2020, 9:59 PM IST

ನವದೆಹಲಿ: ಕ್ರಿಕೆಟ್​ ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಾಣ ಮಾಡುವ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಇದೀಗ ಮತ್ತೊಂದು ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ ಮೊದಲ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡೆಲ್ಲಿ ಡ್ಯಾಶರ್​ ವಿರಾಟ್​ ಕೊಹ್ಲಿ ಇನ್​​ಸ್ಟಾಗ್ರಾಮ್​​ನಲ್ಲಿ 70 ಮಿಲಿಯನ್​ ಫಾಲೋವರ್ಸ್​​ ಹೊಂದಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ ಸ್ಫೋರ್ಟ್ಸ್​​ ಸೆಲಿಬ್ರೆಟಿಗಳ ಪೈಕಿ ವಿರಾಟ್​ ಕೊಹ್ಲಿ ಈ ಸಾಧನೆ ಮಾಡಿರುವ 4ನೇ ಆಟಗಾರನಾಗಿದ್ದು, ಈಗಾಗಲೇ ಪೋರ್ಚುಗಲ್‌ನ ಫುಟ್ಬಾಲ್​ ಪ್ಲೇಯರ್​​ ಕ್ರಿಸ್ಟಿಯಾನೋ ರೊನಾಲ್ಡೊ (232 ಮಿಲಿಯನ್), ಬಾರ್ಸಿಲೋನಾ ದಂತಕಥೆ ಲಿಯೋನೆಲ್ ಮೆಸ್ಸಿ (161 ಮಿಲಿಯನ್) ಮತ್ತು ಬ್ರೆಜಿಲ್‌ನ ಫುಟ್ಬಾಲ್​ ಪ್ಲೇಯರ್​ ನೇಮರ್ (140 ಮಿಲಿಯನ್) ಅನುಯಾಯಿಗಳನ್ನ ಹೊಂದಿದ್ದಾರೆ.

ಉಳಿದಂತೆ ಬಾಲಿವುಡ್​​ನಲ್ಲಿ ಪ್ರಿಯಾಂಕಾ ಚೋಪ್ರಾ 55 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಈ ಹಿಂದೆ ಒಂದು ಪೋಸ್ಟ್​​ ಗೆ ವಿರಾಟ್ ಕೊಹ್ಲಿ 1.35 ಕೋಟಿ ರುಪಾಯಿ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ಅದು 3.6 ಕೋಟಿ ರೂಗೆ ಬಂದು ನಿಂತಿದೆ ಎಂದು ತಿಳಿದು ಬಂದಿದೆ.

ಉಳಿದಂತೆ ಪೋರ್ಚುಗಲ್​ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ 6.73 ಕೋಟಿ ರೂ. ನೇಮರ್(4.97 ಕೋಟಿ), ಲಿಯೋನೆಲ್ ಮೆಸ್ಸಿ(4.47 ಕೋಟಿ), ಡೇವಿಡ್ ಬೆಕ್ ಹ್ಯಾಂ(2.46 ಕೋಟಿ), ಲೆಬ್ರಾನ್ ಜೇಮ್ಸ್(1.87 ಕೋಟಿ) ಪಡೆಯುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.