ಅಹಮದಾಬಾದ್: ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದು, ಈ ಮೂಲಕ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.
-
28th duck in Int'ls for Virat Kohli (Tests 12, ODIs 13, T20Is 3). 2nd consecutive duck in Int'ls & 3rd duck in last 5 Int'l inns. Kohli has not scored an Int'l century in his last 37 inns, last Int'l century was v Bangladesh in India on 23rd Nov 2019. Massively Overrated #Cricket
— Daniel Alexander (@daniel86cricket) March 12, 2021 " class="align-text-top noRightClick twitterSection" data="
">28th duck in Int'ls for Virat Kohli (Tests 12, ODIs 13, T20Is 3). 2nd consecutive duck in Int'ls & 3rd duck in last 5 Int'l inns. Kohli has not scored an Int'l century in his last 37 inns, last Int'l century was v Bangladesh in India on 23rd Nov 2019. Massively Overrated #Cricket
— Daniel Alexander (@daniel86cricket) March 12, 202128th duck in Int'ls for Virat Kohli (Tests 12, ODIs 13, T20Is 3). 2nd consecutive duck in Int'ls & 3rd duck in last 5 Int'l inns. Kohli has not scored an Int'l century in his last 37 inns, last Int'l century was v Bangladesh in India on 23rd Nov 2019. Massively Overrated #Cricket
— Daniel Alexander (@daniel86cricket) March 12, 2021
ಇಂಗ್ಲೆಂಡ್ ವಿರುದ್ಧ ಈಗಾಗಲೇ ಮುಕ್ತಾಯಗೊಂಡಿರುವ ಟೆಸ್ಟ್ ಕ್ರಿಕೆಟ್ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರನ್ ಮಷಿನ್ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಸರಣಿಯಲ್ಲೂ ನೀರಸ ಪ್ರದರ್ಶನ ಮುಂದುವರಿಸಿದ್ದು, ಇಂದಿನ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28ನೇ ಸಲ ಡಕ್ ಔಟ್ ಆಗಿ ಬೇಡದ ಪಟ್ಟಿಯಲ್ಲಿ ಗಂಗೂಲಿ ದಾಖಲೆ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: ಬ್ಯಾಟಿಂಗ್ ವೈಫಲ್ಯದ ನಡುವೆ ಅಬ್ಬರಿಸಿದ ಶ್ರೇಯಸ್: ಇಂಗ್ಲೆಂಡ್ ಗೆಲುವಿಗೆ 125 ರನ್ ಟಾರ್ಗೆಟ್
ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ 6 ಇನ್ನಿಂಗ್ಸ್ಗಳಿಂದ ಕೊಹ್ಲಿ ಕೇವಲ 172ರನ್ಗಳಿಕೆ ಮಾಡಿದ್ದರು. ಆದರೆ ಯಾವುದೇ ಪಂದ್ಯಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ವಿಶೇಷವೆಂದರೆ ಅಹಮದಾಬಾದ್ನ ಮೊಟೆರೊ ಮೈದಾನದಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ಮತ್ತೊಮ್ಮೆ ಶೂನ್ಯ ಸಂಪಾದನೆ ಮಾಡಿ ಬ್ಯಾಕ್ ಟು ಬ್ಯಾಕ್ ಡಕ್ಔಟ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಕ್ರಮವಾಗಿ ಟೆಸ್ಟ್ನಲ್ಲಿ 12, ಏಕದಿನ 13 ಹಾಗೂ ಟಿ-20ಯಲ್ಲಿ 3 ಸಲ ಡಕ್ಔಟ್ ಆಗಿದ್ದು, ಕಳೆದ ಐದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಮೂರು ಸಲ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಕಳೆದ 37 ಇನ್ನಿಂಗ್ಸ್ಗಳಿಂದ ವಿರಾಟ್ ಶತಕ ದಾಖಲು ಮಾಡಿಲ್ಲ. 2019ರಲ್ಲಿ ಬಾಂಗ್ಲಾ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಶತಕಗಳಿಕೆ ಮಾಡಿರುವುದು ಕೊನೆಯದಾಗಿದೆ.
Conclusion: