ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಪ್ಲೇಯರ್ಸ್ ನೆಟ್ಸ್‌ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಇದೀಗ ಕನ್ನಡಿಗ ಕೆಎಲ್ ರಾಹುಲ್ ಮೈದಾನಕ್ಕಿಳಿದು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.
-
music to my ears 🏏 @lionsdenkxip pic.twitter.com/m8xim6pchV
— K L Rahul (@klrahul11) August 10, 2020 " class="align-text-top noRightClick twitterSection" data="
">music to my ears 🏏 @lionsdenkxip pic.twitter.com/m8xim6pchV
— K L Rahul (@klrahul11) August 10, 2020music to my ears 🏏 @lionsdenkxip pic.twitter.com/m8xim6pchV
— K L Rahul (@klrahul11) August 10, 2020
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್, ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದು, ಬ್ಯಾಟ್ನಿಂದ ಚೆಂಡು ಹೊಡೆದಾಗ ಬರುತ್ತಿರುವ ಶಬ್ದವು ಕಿವಿಗೆ ಸಂಗೀತದಂತೆ ಕೇಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರಿಷಭ್ ಪಂತ್ ಸೇರಿದಂತೆ ಅನೇಕ ಪ್ಲೇಯರ್ಸ್ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ವಿಡಿಯೋ ಹರಿಬಿಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಕೆ.ಎಲ್ ರಾಹುಲ್ ಹೆಗಲ ಮೇಲೆ ಈ ಸಲ ಹೊಸ ಜವಾಬ್ದಾರಿ ಬಿದ್ದಿದ್ದು, ಅವರು ತಂಡ ಮುನ್ನಡೆಸುವ ಜತೆಗೆ ವಿಕೆಟ್ ಕೀಪರ್ ಕಾರ್ಯ ನಿರ್ವಹಿಸಲಿದ್ದಾರೆ. ಅನಿಲ್ ಕುಂಬ್ಳೆ ನೇತೃತ್ವದ ಕಿಂಗ್ಸ್ ಇಲೆವೆನ್ ತಂಡದಲ್ಲಿ ಹೆಚ್ಚಾಗಿ ಕನ್ನಡಿಗರೇ ಹೆಚ್ಚಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.