ಕೋಲ್ಕತ್ತಾ: ಐಪಿಎಲ್‌ನ 2020ರ ಆವೃತ್ತಿಯ ಹರಾಜಿಗೂ ಮುನ್ನ, ಕೆಕೆಆರ್ ತಂಡದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಕ್ರಿಸ್ಲಿನ್ರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ತಂಡದ ಸಿಇಒ ಟ್ವೀಟ್ ಮಾಡಿ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.
ಅಬುದಾಬಿ ಟಿ20 ಲೀಗ್ನಲ್ಲಿ ಕ್ರಿಸ್ಲಿನ್ ಜೊತೆಯಾಗಿ ಆಡುತ್ತಿರುವ ಯುವರಾಜ್ ಸಿಂಗ್ "ಕೆಕೆಆರ್, ಲಿನ್ರನ್ನು ತಂಡದಿಂದ ರಿಲೀಸ್ ಮಾಡಿದ್ದು ತಪ್ಪು ನಿರ್ಧಾರ" ಎಂದು ಟೀಕಿಸಿದ್ದರು. ಏಕೆಂದರೆ ಕ್ರಿಸ್ಲಿನ್ ಕೆಕೆಆರ್ ತಂಡದಿಂದ ಹೊರಬಿದ್ದ ದಿನವೇ ಟಿ20 ಲೀಗ್ನಲ್ಲಿ ಕೇವಲ 30 ಎಸೆತಗಳಲ್ಲಿ 91 ರನ್ ಗಳಿಸಿದ್ದರು. ಈ ಮೂಲಕ ಟಿ20 ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ್ದರು.
-
@YUVSTRONG12 we released @lynny50 so that we could bid for you! 😜 Love and respect for both of you champions! #IPL2020 #KKR #Legends #Sixhitters @KKRiders
— Venky Mysore (@VenkyMysore) November 19, 2019 " class="align-text-top noRightClick twitterSection" data="
">@YUVSTRONG12 we released @lynny50 so that we could bid for you! 😜 Love and respect for both of you champions! #IPL2020 #KKR #Legends #Sixhitters @KKRiders
— Venky Mysore (@VenkyMysore) November 19, 2019@YUVSTRONG12 we released @lynny50 so that we could bid for you! 😜 Love and respect for both of you champions! #IPL2020 #KKR #Legends #Sixhitters @KKRiders
— Venky Mysore (@VenkyMysore) November 19, 2019
ಯುವರಾಜ್ ಟೀಕೆಗೆ ತಮಾಷೆಯಾಗಿ ಉತ್ತರಿಸಿರುವ ಕೆಕೆಆರ್ ಸಿಇಒ ವೆಂಕಿ ಮೈಸೂರು" ಕ್ರಿಸ್ಲಿನ್ರನ್ನು ತಂಡದಿಂದ ರಿಲೀಸ್ ಮಾಡಿದ್ದು ನಿಮ್ಮ ಮೇಲೆ ಬಿಡ್ ಮಾಡುವ ಸಲುವಾಗಿ, ನಿಮ್ಮಿಬ್ಬರ ಮೇಲೆ ಅಪಾರ ಗೌರವ ಹಾಗೂ ಪ್ರೀತಿ ಇದೆ" ಎಂದು ಟ್ವೀಟ್ ಮಾಡಿ ಯುವಿ ಕಾಲೆಳೆದಿದ್ದಾರೆ.
ಕ್ರಿಸ್ಲಿನ್ 2014 ಹಾಗೂ 2017ರಿಂದ ಕೆಕೆಆರ್ ತಂಡದಲ್ಲಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಲಿನ್ ಪ್ರದರ್ಶನ ತೃಪ್ತಿ ತರದ ಕಾರಣ ಅವರನ್ನು ಕೆಕೆಆರ್ ತಂಡ ಕೈಬಿಟ್ಟಿದೆ. ಆದರೆ ಈ ಬಾರಿಯೂ ಲಿನ್ ಹರಾಜಿನಲ್ಲಿ ದುಬಾರಿ ಬೆಲೆಗೆ ಖರೀದಿಯಾಗುವ ಲಕ್ಷಣಗಳಿವೆ.