ಮುಂಬೈ: ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಆದ ಐಪಿಎಲ್ 2020ರ ಆವೃತ್ತಿಗೆ ಡಿಸೆಂಬರ್ 20ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಲೇ ಕೆಲವು ಆಟಗಾರರ ಬಗ್ಗೆ ಚರ್ಚೆ ಆರಂಭವಾಗಿದೆ.
ಭಾರತದ ಮಾಜಿ ಕ್ರಿಕೆಟಿಗೆ ಹಾಗೂ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಜಯ್ ಮಂಜ್ರೇಕರ್ ವಿಂಡೀಸ್ನ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಐಪಿಎಲ್ಗೆ ಸರಿಯಾದ ಬೌಲರ್. ಇವರತ್ತ ಗಮನ ನೀಡಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದು, ನಿಮ್ಮ ಮಾತು ಸಂಪೂರ್ಣವಾಗಿ ಒಪ್ಪುವಂತದ್ದಲ್ಲ. ಅವರು ಸಾಕಷ್ಟು ಉತ್ತಮ ಬೌಲರ್ ಅಲ್ಲ! ಅವರಲ್ಲಿ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟರೆ ಬೇರೇನೂ ವಿಶೇಷತೆಯಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
-
Go for Kesrick Williams guys. Perfect bowler for IPL conditions. #IPLAuction
— Sanjay Manjrekar (@sanjaymanjrekar) December 15, 2019 " class="align-text-top noRightClick twitterSection" data="
">Go for Kesrick Williams guys. Perfect bowler for IPL conditions. #IPLAuction
— Sanjay Manjrekar (@sanjaymanjrekar) December 15, 2019Go for Kesrick Williams guys. Perfect bowler for IPL conditions. #IPLAuction
— Sanjay Manjrekar (@sanjaymanjrekar) December 15, 2019
ನೀವು ಟಿ20 ಕ್ರಿಕೆಟ್ ಆಡೇ ಇಲ್ಲ. ಆದರೂ ಆಟಗಾರರನ್ನು ಜಡ್ಜ್ ಮಾಡುತ್ತೀರಾ, ನೀವು ಕೇವಲ ಕಾಮೆಂಟರಿ ಮಾಡಿದರೆ ಸಾಕು ಎಂದು ಮಂಜ್ರೇಕರ್ ಟ್ವೀಟ್ಗೆ ಭಾರತೀಯ ಅಭಿಮಾನಿಗಳು ರಿಪ್ಲೈ ಮಾಡುತ್ತಿದ್ದಾರೆ.
-
@RCBTweets should pouch him given the chemistry he shares with @imVkohli I can see the captain and the bowler comparing notes after a dismissal! Brilliant!!! @CoachHesson @KP24
— Sanjog Gupta (@Sanjog_G) December 15, 2019 " class="align-text-top noRightClick twitterSection" data="
">@RCBTweets should pouch him given the chemistry he shares with @imVkohli I can see the captain and the bowler comparing notes after a dismissal! Brilliant!!! @CoachHesson @KP24
— Sanjog Gupta (@Sanjog_G) December 15, 2019@RCBTweets should pouch him given the chemistry he shares with @imVkohli I can see the captain and the bowler comparing notes after a dismissal! Brilliant!!! @CoachHesson @KP24
— Sanjog Gupta (@Sanjog_G) December 15, 2019
ಇನ್ನೂ ಕೆಲವರು ವಿಲಿಯಮ್ಸ್ ಎಲ್ಲಾ ಕ್ರಿಕೆಟ್ನ ಬಲಿಷ್ಠ ರಾಷ್ಟ್ರಗಳೊಡನೆ ಆಡಿದ್ದು, ಉತ್ತಮ ವಿಕೆಟ್ ಟೇಕರ್ ಆಗಿದ್ದಾರೆ. ಅವರು ಐಪಿಎಲ್ಗೆ ಉತ್ತಮ ಬೌಲರ್ ಎಂದು ಹೇಳುವ ಮೂಲಕ ಪೀಟರ್ಸನ್ಗೆ ಟಾಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ಹರಾಜಿಗೂ ಮುನ್ನವೇ ಆಟಗಾರರ ಕುರಿತು ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಡಿಸೆಂಬರ್ 19 ರಂದು ಯಾರು ಎಷ್ಟು ಕೋಟಿ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.