ETV Bharat / sports

ಇಂದಿನಿಂದ ಟೆಸ್ಟ್​​:   ಜೋ ರೂಟ್​ ನೀಡಿದ ಸಲಹೆ ಬಯಲು ಮಾಡಿದ ಬೆನ್​ ಸ್ಟೋಕ್ಸ್​​

ಇಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ತಮ್ಮ ಎರಡನೇ ಮಗುವನ್ನು ನಿರೀಕ್ಷೆಯಲ್ಲಿರುವ ರೂಟ್​ ಪತ್ನಿಯೊಂದಿಗೆ ಇರಲು ಬಯಸಿದ್ದು, ಅವರು ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ತಂಡದ ನಾಯಕ ಜವಾಬ್ದಾರಿಯನ್ನ ಸ್ಟಾರ್ ಆಲ್​ ರೌಂಡರ್​ ಬೆನ್ ಸ್ಟೋಕ್ಸ್ ಗೆ ನೀಡಲಾಗಿದೆ.

ಬೆನ್​ ಸ್ಟೋಕ್ಸ್​​
ಬೆನ್​ ಸ್ಟೋಕ್ಸ್​​
author img

By

Published : Jul 8, 2020, 8:39 AM IST

ಸೌತಾಂಪ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದು ನಡೆಯಲಿದ್ದು, ಇಂಗ್ಲೆಂಡ್‌ನ 81ನೇ ಟೆಸ್ಟ್ ನಾಯಕನಾಗಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಾಯಕ ಜೋ ರೂಟ್ ಅವರ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.

ಇಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ತಮ್ಮ ಎರಡನೇ ಮಗುವನ್ನು ನಿರೀಕ್ಷೆಯಲ್ಲಿರುವ ರೂಟ್​ ಪತ್ನಿಯೊಂದಿಗೆ ಇರಲು ಬಯಸಿದ್ದು, ಅವರು ಮೊದಲ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ತಂಡದ ನಾಯಕತ್ವದ ಜವಾಬ್ದಾರಿಯನ್ನ ಸ್ಟಾರ್ ಆಲ್​ ರೌಂಡರ್​ ಬೆನ್ ಸ್ಟೋಕ್ಸ್​​​​​ಗೆ ನೀಡಲಾಗಿದೆ.

"ನಾನು ನಿಮಗೆ ಹೆಚ್ಚು ಸಲಹೆ ನೀಡುವುದಿಲ್ಲ, ಸಾಕಷ್ಟು ವಿಷಯಗಳು ನಿಮ್ಮ ಮನಸ್ಸಿನಲ್ಲಿ ಓಡುತ್ತಿರುತ್ತವೆ," ಎಂದು ಸುದ್ದಿಗಾರರಿಗೆ ತಿಳಿಸಿದರು. "ಬ್ಲೇಜರ್‌ನೊಂದಿಗೆ ಫೋಟೊ ತೆಗೆಯುವಾಗ ಅತ್ಯುತ್ತಮ ಸಂದೇಶವನ್ನು ಸ್ವೀಕರಿಸಿದ್ದೇನೆ. ಖಾಯಂ ನಾಯಕ ಜೋ ರೂಟ್‌ ಅವರು, 'ನಿನ್ನ ಹಾದಿಯಲ್ಲಿ ನೀನು ತಂಡವನ್ನು ಮುನ್ನೆಡಸು' ಎಂಬ ಸಲಹೆ ನೀಡಿದ್ದಾರೆ ಎಂದು ಸ್ಟೋಕ್ಸ್‌ ಬಹಿರಂಗ ಪಡಿಸಿದ್ದಾರೆ.

ಅಂಗಳದಲ್ಲಿ ಅಗತ್ಯಬಿದ್ದಾಗ ಹಿರಿಯ ಅನುಭವಿ ಆಟಗಾರರಿಂದ ಸೂಕ್ತ ಸಲಹೆಯನ್ನು ಪಡೆಯಲು ಪ್ರಯತ್ನಿಸುತ್ತೇನೆ. ಜೋ ರೂಟ್‌ ಕುಟುಂಬದ ಕಾರಣದಿಂದ ಪಂದ್ಯಕ್ಕೆ ಅಲಭ್ಯರಾಗಿದ್ದರೂ ಹಾಗೂ ಮನೆಯಲ್ಲಿದ್ದರು ನಮಗೆ ಲಭ್ಯರಿರುತ್ತಾರೆ ಎಂಬ ವಿಷಯವನ್ನು ಇದೇ ವೇಳೆ ಬೆನ್‌ ಸ್ಟೋಕ್ಸ್ ಹಂಚಿಕೊಂಡರು.

"ತಂಡದ ಆಟಗಾರರ ಸಲಹೆ ಹಾಗೂ ಅಭಿಪ್ರಾಯಗಳಿಗೆ ಮುಕ್ತನಾಗಿರುತ್ತೇನೆ ಹಾಗೂ ಜೋ ರೂಟ್ ಇಲ್ಲಿ ಉಪಸ್ಥಿತರಿರಲ್ಲ ಎಂದ ಮಾತ್ರಕ್ಕೆ ಅವರ ಸಹಾಯ ಪಡೆಯುವುದಿಲ್ಲ ಎಂದರ್ಥವಲ್ಲ. ಅವರು ಮನೆಯಲ್ಲಿ ಇದ್ದರೂ ನಮಗೆ ಲಭ್ಯರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

"ಜೋ ರೂಟ್‌ ಅವರು ತಂಡದ ಎಲ್ಲ ಆಟಗಾರರ ಸಲಹೆ - ಅಭಿಪ್ರಾಯಗಳನ್ನು ಮುಕ್ತವಾಗಿ ಪಡೆಯುತ್ತಿದ್ದರು. ನಾನು ಅದನ್ನು ಮೀರಿ ನಡೆದರೆ, ನನ್ನಂತ ದಡ್ಡ ಮತ್ತೊಬ್ಬರಿಲ್ಲ ಎಂದು ಭಾವಿಸುತ್ತೇನೆ. ನಮ್ಮ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ಹಾಗಾಗಿ ಪಂದ್ಯದಲ್ಲಿ ಅಗತ್ಯ ಬಿದ್ದಾಗ ಅವರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

"ಕುಟುಂಬದ ಜೊತೆ ಇರಲು ಜೋ ರೂಟ್‌ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ, ಅವರು ಮನೆಯಲ್ಲಿ ಇರುವಾಗ ಟಿವಿಯಲ್ಲಿ ಪಂದ್ಯ ನೋಡಬಹುದು ಅಥವಾ ಅವರ ಬಳಿ ಫೋನ್ ಯಾವಾಗಲೂ ಲಭ್ಯ ಇರುತ್ತದೆ. ಅಗತ್ಯಬಿದ್ದಾಗ ಅವರ ಬಳಿ ಮಾತನಾಡುತ್ತೇವೆ ಎಂದು ಬೆನ್‌ ಸ್ಟೋಕ್ಸ್‌ ಹೇಳಿದರು.

ನಾಯಕ ಜೋ ರೂಟ್‌ ಅವರು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಕೊನೆಯ ಎರಡು ಪಂದ್ಯಗಳಿಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.