ಲಂಡನ್: ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದ ಜೇಸನ್ ರಾಯ್ ಇದೀಗ ಏಕದಿನ ಸರಣಿಯಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೈಡ್ಸ್ಟ್ರೈನ್ ಗಾಯಕ್ಕೆ ತುತ್ತಾಗಿದ್ದ ರಾಯ್ ಸಂಪೂರ್ಣವಾಗಿ ಫಿಟ್ ಅಗಿದ್ದು, ಕಾಂಗರೂ ವಿರುದ್ಧದ ಮೂರು ಏಕದಿನ ಪಂದ್ಯಗಳಿಗಾಗಿ ಇಸಿಬಿ ಘೋಷಿಸಿರುವ 14 ಸದಸ್ಯರ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಏಕದಿನ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಟಿ-20 ಸರಣಿಯಲ್ಲಿ ಮಿಂಚಿದ ಡೇವಿಡ್ ಮಲನ್ ಅವರನ್ನು ಮೀಸಲು ಆಟಗಾರನನ್ನಾಗಿ ಆಯ್ಕೆ ಮಾಡಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ 129 ರನ್ಗಳಿಸಿದ್ದ ಮಲನ್ ಐಸಿಸಿ ಟಿ-20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲೆ ಏಕದಿನ ಕ್ರಿಕೆಟ್ಗೂ ಮರಳುವ ಸಾಧ್ಯತೆ ಇದೆ.
-
Welcome back @jasonroy20 💪
— England Cricket (@englandcricket) September 9, 2020 " class="align-text-top noRightClick twitterSection" data="
">Welcome back @jasonroy20 💪
— England Cricket (@englandcricket) September 9, 2020Welcome back @jasonroy20 💪
— England Cricket (@englandcricket) September 9, 2020
ಏಕದಿನ ತಂಡದಲ್ಲಿದ್ದ ಜೋ ಡೆನ್ಲಿಯನ್ನು ತಂಡದಿಂದ ಕೈಬಿಡಲಾಗಿದ್ದು, ಅವರು ಟಿ-20 ಬ್ಲಾಸ್ಟ್ಗಾಗಿ ಕೆಂಟ್ ತಂಡ ಸೇರಿಕೊಳ್ಳಲಿದ್ದಾರೆ. ಮಲನ್ ಜೊತೆ ಫಿಲ್ ಸಾಲ್ಟ್ ಮತ್ತು ಶಕೀಬ್ ಮಹಮೂದ್ ಮೀಸಲು ಆಟಗಾರರಾಗಿದ್ದಾರೆ. ಸೆಪ್ಟೆಂಬರ್ 11,13 ಹಾಗೂ 16ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ.
ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್ಸ್ಟೋವ್, ಟಾಮ್ ಬ್ಯಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕರನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.