ETV Bharat / sports

ವಿಶ್ವಕಪ್​​​​ ಮೊದಲು, ನಂತರ ಕ್ರಿಕೆಟರ್ಸ್​ಗೆ ಐಸೋಲೇಷನ್ ಮಾಡಿ: ಫಾಫ್ ಡು ಪ್ಲೆಸಿಸ್ - ಟಿ-20 ವಿಶ್ವಕಪ್​

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್​​ ಮೊದಲು ಹಾಗೂ ತದನಂತರ ಪ್ಲೇಯರ್ಸ್​ಗಳಿಗೆ ಐಸೋಲೇಷನ್​ ಮಾಡಿ ಟೂರ್ನಿ ನಡೆಸುವಂತೆ ದಕ್ಷಿಣ ಆಫ್ರಿಕಾ ಪ್ಲೇಯರ್​ ಡುಪ್ಲೆಸಿಸ್​ ಅಭಿಪ್ರಾಯ ಪಟ್ಟಿದ್ದಾರೆ.

Faf du Plessis
Faf du Plessis
author img

By

Published : May 14, 2020, 3:50 PM IST

ಕೇಪ್​ಟೌನ್​: ಅಕ್ಟೋಬರ್​ 18ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ​​ ಆರಂಭಗೊಳ್ಳುವುದು ಬಹುತೇಕ ಡೌಟ್​ ಎಂದು ಹೇಳಲಾಗ್ತಿದ್ದು, ಕೊರೊನಾ ವೈರಸ್​ ಕರಿನೆರಳು ಅದರ ಮೇಲೂ ಬೀಳಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರ್ತಿವೆ. ಇದರ ಮಧ್ಯೆ ದಕ್ಷಿಣ ಆಫ್ರಿಕಾದ ಕ್ರಿಕೆಟರ್​ ಫಾಫು ಡು ಪ್ಲೆಸಿಸ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಪ್ರಪಂಚದಾದ್ಯಂತ ಕೊರೊನಾ ವೈರಸ್​ ಅಬ್ಬರ ಜೋರಾಗಿರುವ ಕಾರಣ ನಿಗದಿಗೊಂಡಿದ್ದ ಅನೇಕ ಕ್ರಿಕೆಟ್​​ ಟೂರ್ನಮೆಂಟ್​​ ಮುಂದೂಡಿಕೆಯಾಗಿದ್ದು, ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಇನ್ನು ಅಕ್ಟೋಬರ್ ​- ನವೆಂಬರ್​ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್​ ಟೂರ್ನಮೆಂಟ್​​ ನಡೆಯುವುದು ಬಹುತೇಕ ಡೌಟ್​ ಎನ್ನಲಾಗ್ತಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡು ಪ್ಲೆಸಿಸ್​, ಟೂರ್ನಿಯಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾ ತೆರಳುವ ಪ್ಲೇಯರ್ಸ್​​ಗಳು ಎರಡು ವಾರಗಳ ಕಾಲ ಅಲ್ಲೇ ಐಸೋಲೇಷನ್​ಗೆ ಒಳಗಾಗಿ ತದನಂತರ ಟೂರ್ನಿಯಲ್ಲಿ ಭಾಗಿಯಾಗಲಿ. ಟೂರ್ನಿ ಮುಗಿದ ಬಳಿಕ ಕೂಡ ಎರಡು ವಾರಗಳ ಕಾಲ ಅವರು ಐಸೋಲೇಷನ್​​ಗೆ ಒಳಪಡಲಿ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಎಲ್ಲ ದೇಶದ ಕ್ರಿಕೆಟರ್ಸ್​ ಅಲ್ಲಿಗೆ ಬರುವುದರಿಂದ ತೊಂದರೆ ಜಾಸ್ತಿಯಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಹೆಚ್ಚು ಇಲ್ಲ. ಆದರೆ, ಭಾರತ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾದಂತಹ ದೇಶದ ಪ್ಲೇಯರ್ಸ್​ಗಳಿಗೆ ಇದರಿಂದ ಹೆಚ್ಚು ತೊಂದರೆ ಆಗಲಿದೆ ಎಂದಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಟೆಸ್ಟ್, ಮತ್ತು ಟಿ-20 ನಾಯಕತ್ವ ಸ್ಥಾನದಿಂದ ಫಾಫ್ ಡು ಪ್ಲೆಸಿಸ್ ಕೆಳಗಿಳಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.