ಬರೋಡ್: ಟೀಂ ಇಂಡಿಯಾದ ಸ್ವಿಂಗ್ ಕಿಂಗ್ ಎಂದು ಖ್ಯಾತಿ ಗಳಿಸಿದ್ದ ಹಿರಿಯ ಆಲ್ರೌಂಡರ್ ಇರ್ಫಾನ್ ಪಠಾಣ್ ಎಲ್ಲ ಮಾದರಿ ಕ್ರಿಕೆಟ್ಗೆ ದಿಢೀರ್ ವಿದಾಯ ಘೋಷಣೆ ಮಾಡಿದ್ದಾರೆ.
2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಈ ಪ್ಲೇಯರ್ 2012ರ ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಕೊನೆಯದಾಗಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.
19 ವರ್ಷದವರಿಂದಾಗಲೇ ತಂಡಕ್ಕೆ ಸೇರಿಕೊಂಡಿದ್ದ ಈ ಪ್ಲೇಯರ್ ಒಟ್ಟು 17 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 301 ವಿಕೆಟ್ ಪಡೆದುಕೊಂಡಿದ್ದಾರೆ.
2006ರಲ್ಲಿ ಕರಾಚಿಯಲ್ಲಿ ಪಾಕ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಓವರ್ನಲ್ಲೇ ಸಲ್ಮಾನ್ ಭಟ್, ಯೂನಿಸ್ ಖಾನ್ ಹಾಗೂ ಮೊಹಮ್ಮದ್ ಯುಸೂಫ್ ವಿಕೆಟ್ ಪಡೆದು ಮೊದಲ ಓವರ್ನಲ್ಲೇ ಭಾರತದ ಪರ ಹ್ಯಾಟ್ರಿಕ್ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜತೆಗೆ 2007ರಲ್ಲಿ ನಡೆದ ಚೊಚ್ಚಲ ಟಿ-20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಇರ್ಫಾನ್ ಪಠಾಣ್ 29 ಟೆಸ್ಟ್ ಪಂದ್ಯಗಳಿಂದ 100 ವಿಕೆಟ್, 1 ಶತಕ ಹಾಗೂ 6 ಅರ್ಧಶತಕ ಸೇರಿ 1105 ರನ್, 120 ಏಕದಿನ ಪಂದ್ಯಗಳಿಂದ 173 ವಿಕೆಟ್, 5 ಅರ್ಧಶತಕ ಸೇರಿ 1544 ರನ್ ಹಾಗೂ 24 ಟಿ-20 ಪಂದ್ಯಗಳಿಂದ 28 ವಿಕೆಟ್ ಸೇರಿ 172ರನ್ಗಳಿಕೆ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೀ ಕಿಂಗ್ಸ್ ಪಂಜಾಬ್, ಡೆಲ್ಲಿ,ರೈಸಿಂಗ್ ಪುಣೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ತಂಡದ ಪರ ಆಟವಾಡಿದ್ದು, ರಣಜಿಯಲ್ಲಿ ಬರೋಡ್ ಹಾಗೂ ಜಮ್ಮು-ಕಾಶ್ಮೀರ ತಂಡವನ್ನ ಪ್ರತಿನಿಧಿಸುತ್ತಿದ್ದರು.