ETV Bharat / sports

ಇದು ಐಪಿಎಲ್​​, ಚೀನಾ ಪ್ರೀಮಿಯರ್​ ಲೀಗ್​ ಅಲ್ಲ... ವಿವೋ ಪ್ರಾಯೋಜಕತ್ವ ಕೊನೆಗಾಣಿಸಲು ನೆಸ್ ವಾಡಿಯಾ ಮನವಿ - ಇಂಡಿಯಾ- ಚೀನಾ ಗಡಿ ಸಂಘರ್ಷ

ಗಡಿ ಘರ್ಷಣೆ ನಂತರ ಚೀನಾ ಪ್ರಾಯೋಜಕತ್ವನ್ನು ಪರೀಶೀಲನೆ ನಡೆಸಲು ಐಪಿಎಲ್​ ಆಡಳಿತ ಮಂಡಳಿ ಸಭೆ ಕರೆದಿತ್ತು. ಆದರೆ ಸಭೆ ನಡೆಯುವ ಮುನ್ನವೇ ಕೇಂದ್ರ ಸರ್ಕಾರ ಚೀನಾ ಮೂಲದ 59 ಮೊಬೈಲ್​ ಅಪ್ಲಿಕೇಷನ್​ಗಳನ್ನು ನಿಷೇಧಿಸಿದೆ. ಐಪಿಎಲ್​ನ ಟೈಟಲ್​ ಮಾಲೀಕತ್ವ ಹೊಂದಿರುವ ಚೀನಾ ಮೂಲದ ವಿವೋ ಮೊಬೈಲ್​ ಕಂಪನಿ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದು 440 ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡುತ್ತಿದೆ. ಈ ಟೈಟಲ್​ ಪ್ರಾಯೋಜಕತ್ವದ ಅವಧಿ 2022ಕ್ಕೆ ಕೊನೆಗೊಳ್ಳಲಿದೆ.

IPL should sever ties with Chinese sponsors:
ಕಿಂಗ್ಸ್​ ಇಲೆವೆನ್​ ಮಾಲೀಕ ನೆಸ್​ ವಾಡಿಯಾ
author img

By

Published : Jul 1, 2020, 1:24 PM IST

ನವದೆಹಲಿ: ಈಸ್ಟರ್ನ್​ ಲಡಾಖ್​​ನಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಚೀನಿ ವಸ್ತುಗಳನ್ನು ನಿಷೇಧಿಸುವಂತೆ ದೇಶೆದೆಲ್ಲೆಡೆ ಕೂಗು ಕೇಳಿಬರುತ್ತಿದೆ. ಇದರ ಬೆನ್ನೆಲ್ಲೇ ಕೇಂದ್ರ ಸರ್ಕಾರ ಕೂಡ 59 ಚೀನಿ ಮೊಬೈಲ್​ ಅಪ್ಲಿಕೇಷನ್​ಗಳನ್ನು ನಿಷೇಧಿಸಿದೆ. ಇದೀಗ ಜಗತ್ತಿನ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ ಚೀನಾದ ಪ್ರಾಯೋಜಕತ್ವವ​ನ್ನು ಕೊನೆಗಾಣಿಸಬೇಕು ಎಂದು ಕಿಂಗ್ಸ್​ ಇಲೆವೆನ್​ ಪ್ರಾಂಚೈಸಿ ಮಾಲೀಕ ನೆಸ್​ ವಾಡಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಡಿ ಗಲಾಟೆ ನಂತರ ಚೀನಾ ಪ್ರಾಯೋಜಕತ್ವನ್ನು ಪರಿಶೀಲನೆ ನಡೆಸಲು ಐಪಿಎಲ್​ ಆಡಳಿತ ಮಂಡಳಿ ಸಭೆ ಕರೆದಿತ್ತು. ಆದರೆ ಸಭೆ ನಡೆಯುವ ಮುನ್ನವೇ ಕೇಂದ್ರ ಸರ್ಕಾರ ಚೀನಾ ಮೂಲದ 59 ಮೊಬೈಲ್​ ಅಪ್ಲಿಕೇಷನ್​ಗಳನ್ನು ನಿಷೇಧಿಸಿದೆ. ಐಪಿಎಲ್​ನ ಟೈಟಲ್​ ಮಾಲೀಕತ್ವ ಹೊಂದಿರುವ ಚೀನಾ ಮೂಲದ ವಿವೋ ಮೊಬೈಲ್​ ಕಂಪನಿ 5 ವರ್ಷದ ಒಪ್ಪಂದ ಮಾಡಿಕೊಂಡಿದ್ದು, 440 ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡುತ್ತಿದೆ. ಈ ಟೈಟಲ್​ ಪ್ರಾಯೋಜಕತ್ವದ ಅವಧಿ 2022ಕ್ಕೆ ಕೊನೆಗೊಳ್ಳಲಿದೆ.

Chinese sponsors
ವಿವೋ ಐಪಿಎಲ್​

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಸ್​ ವಾಡಿಯಾ," ರಾಷ್ಟ್ರದ ಹಿತದೃಷ್ಟಿಯಿಂದ ಇದನ್ನು( ಚೀನಾ ಸ್ಪಾನ್ಸರ್​ಶಿಪ್​ನಿಂದ ಬಿಡುಗಡೆ) ಮಾಡಬೇಕಿದೆ. ಈ ವಿಚಾರದಲ್ಲಿ ದೇಶ ಮೊದಲು, ಹಣಕಾಸಿಗೆ ನಂತರದ ಸ್ಥಾನ. ಇದು ಇಂಡಿಯನ್​ ಪ್ರೀಮಿಯರ್​ ಹೊರತು ಚೀನಿ ಪ್ರೀಮಿಯರ್​ ಲೀಗ್​ ಅಲ್ಲ. ಇದು( ಚೀನಿ ವಸ್ತುಗಳ ವಿರೋಧಿಸುವುದಕ್ಕೆ) ದೇಶಕ್ಕೆ ಉದಾಹರಣೆಯಾಗಬೇಕು ಎಂದು ವಾಡಿಯಾ ಹೇಳಿದ್ದಾರೆ.

ಹೊಸ ಪ್ರಾಯೋಜಕರನ್ನು ಹುಡುಕುವುದು ಕಷ್ಟದ ಕೆಲಸ. ಆದರೆ ಚೀನಾ ಸ್ಪಾನ್ಸ್​ರ್​ಗಳ ಸ್ಥಾನವನ್ನು ಭಾರತೀಯ ಮೂಲದ ಪ್ರಾಯೋಜಕರು ತುಂಬಲಿದ್ದಾರೆ ಎನ್ನುವುದರಲ್ಲಿ ನನಗೆ ವಿಶ್ವಾಸವಿದೆ. ದೇಶ ಮತ್ತು ಸರ್ಕಾರದ ನಿರ್ಧಾರಗಳಿಗೆ ನಾವು ಗೌರವ ಸಲ್ಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹುತಾತ್ಮರಾದ ಸೈನಿಕರಿಗಾಗಿಯಾದರೂ ಮಾಡಬೇಕು’ ಎಂದು ವಾಡಿಯಾ ಉಲ್ಲೇಖಿಸಿದ್ದಾರೆ.

ಗಾಲ್ವಾನ್​ನಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ಕಲ್ಲು ಹಾಗೂ ಕೋಲುಗಳಿಂದ ದಾಳಿ ನಡೆಸಿದ್ದರು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.