ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಡಿ-ಬಡಿ ಆಟ ಶುರುವಾಗಿದೆ. ಈ ಹಿಂದೆ ನಿರ್ಮಾಣಗೊಂಡಿರುವ ದಾಖಲೆ ಬ್ರೇಕ್ ಆಗುತ್ತಿದ್ದು, ಕ್ರಿಕೆಟರ್ಸ್ ಹೊಸ ಹೊಸ ರೆಕಾರ್ಡ್ ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ ನಿನ್ನೆ ಡೆಲ್ಲಿ ಕ್ಯಾಪಿಟಲ್ ತಂಡದ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ತಂಡದ ಕ್ಯಾಪ್ಟನ್ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಧೋನಿ ಅಮಿತ್ ಮಿಶ್ರಾ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಈ ರೆಕಾರ್ಡ್ ಬರೆದಿದ್ದು, ಎಬಿಡಿ ವಿಲಿಯರ್ಸ್,ಸುರೇಶ್ ರೈನಾ ದಾಖಲೆ ಹಿಂದಿಕ್ಕಿದ್ದಾರೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಭಾರಿಸಿದವರ ಪೈಕಿ ಇದೀಗ ಧೋನಿ 2ನೇ ಸ್ಥಾನದಲ್ಲಿದ್ದಾರೆ. ಒಟ್ಟು 187 ಸಿಕ್ಸರ್ ಸಿಡಿಸಿರುವ ರೆಕಾರ್ಡ್ ಬರೆದಿರುವ ಧೋನಿ, 186 ಸಿಕ್ಸರ್ ಸಿಡಿಸಿರುವ ಎಬಿಡಿ ಹಾಗೂ ರೈನಾ ಹಿಂದಿಕ್ಕಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು 296ಸಿಕ್ಸರ್ ಭಾರಿಸಿರುವ ದಾಖಲೆ ಗೇಲ್ ಹೆಸರಿನಲ್ಲಿದೆ. ಉಳಿದಂತೆ ರೋಹಿತ್ ಶರ್ಮಾ 184,ವಿರಾಟ್ ಕೊಹ್ಲಿ 178 ಹಾಗೂ ಡೇವಿಡ್ ವಾರ್ನರ್ 163 ಸಿಕ್ಸರ್ ಬಾರಿಸಿದ್ದಾರೆ.
ಐಪಿಎಲ್ನಲ್ಲಿ ಅತಿಹೆಚ್ಚು ಸಿಕ್ಸರ್
- ಕ್ರಿಸ್ ಗೇಲ್ 296 ಸಿಕ್ಸರ್
- ಎಂಎಸ್ ಧೋನಿ 187 ಸಿಕ್ಸರ್
- ಎಬಿಡಿ/ರೈನಾ 186ಸಿಕ್ಸರ್
- ರೋಹಿತ್ ಶರ್ಮಾ 184ಸಿಕ್ಸರ್
- ವಿರಾಟ್ ಕೊಹ್ಲಿ 178ಸಿಕ್ಸರ್
- ವಾರ್ನರ್ 163ಸಿಕ್ಸರ್