ಮುಂಬೈ: ವಿಶ್ವ ಕ್ರಿಕೆಟ್ನ ಅತ್ಯಂತ ಶ್ರೀಮಂತ ಟಿ-20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾ ಭೀತಿಯಿಂದ 13ನೇ ಆವೃತ್ತಿ ರದ್ದಾಗುವ ಆತಂಕ ಎದುರಾಗಿದೆ.
ಭಾರತದಲ್ಲಿ ಕೊರೊನಾ ದಿನದಿಂದ ಹೆಚ್ಚಾಗುತ್ತಿದೆ. ಇದರಿಂದ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ರದ್ದಾಗುವ ಹಂತಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಪಿಎಲ್ಅನ್ನು ತನ್ನ ದೇಶದಲ್ಲಿ ನಡೆಸಿಕೊಡುವುದಕ್ಕೆ ಮುಂದಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ವಿಶ್ವವೇ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಇಂತಹ ಸಂದರ್ಭದಲ್ಲಿ ಈ ವಿಷಯ ಕುರಿತು ಚರ್ಚೆ ಮಾಡುವ ಆಲೋಚನೆ ಇಲ್ಲ ಎಂದಿದೆ.
ಐಪಿಎಲ್ ಮಾರ್ಚ್ 29ರಿಂದ ಏಪ್ರಿಲ್ 14ರರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದ ಮೊದಲು ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟು, ಇದೀಗ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಒಂದು ವೇಳೆ ದೇಶ ಮರಳಿ ಸಹಜ ಸ್ಥಿತಿಗೆ ಬಂದರೆ ಮಾತ್ರ ಟೂರ್ನಿ ಆಯೋಜನೆ ಮಾಡಲಾಗುವುದು ಎಂದು ಹೇಳಲಾಗಿತ್ತು.
ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ, ಶ್ರೀಲಂಕಾ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಸಿದ್ಧವಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆ ಇದ್ದು, ಭಾರತಕ್ಕಿಂದ ಬೇಗ ಶ್ರೀಲಂಕಾ ಸಹಜ ಸ್ಥಿತಿಗೆ ಬರಲಿರುವುದರಿಂದ ಎಸ್ಎಲ್ಸಿ ಭಾರತಕ್ಕೆ ಆಫರ್ ನೀಡಿತ್ತು.
ವಿಶ್ವವೇ ಕೊರೊನಾದಿಂದ ಮುಚ್ಚಿಕೊಂಡಿರುವ ಈ ಸ್ಥಿತಿಯಲ್ಲಿ ಬಿಸಿಸಿಐ ಯಾವುದೇ ರೀತಿಯ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೋರ್ಡ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ಗಡಿ ದಾಟಿದೆ. ಇದಕ್ಕೆ ಹೋಲಿಸಿದರೆ ಶ್ರೀಲಂಕಾದಲ್ಲಿ ಕೇವಲ 200 ಇದೆ. ಭಾರತದಲ್ಲಿ ಸಾವಿನ ಸಂಖ್ಯೆಯೇ 500ರ ಗಡಿ ದಾಟಿದೆ .
ಆದರೆ ಬಿಸಿಸಿಐ ಮಾತ್ರ ಈ ವಿಚಾರ ಕುರಿತು ಎಸ್ಎಲ್ಸಿಯಿಂದ ಯಾವುದೇ ಪ್ರಸ್ರಾಪ ಬಂದಿಲ್ಲ. ಮುಂದೆಯೂ ಈ ಕುರಿತು ಚರ್ಚೆ ನಡೆಯುತ್ತದೆ ಎಂಬುದರ ಬಗ್ಗೆಯೂ ಖಚಿತತೆಯಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಎರಡು ಬಾರಿ ಐಪಿಎಲ್ ಟೂರ್ನಿಗಳು ಭಾರತದಿಂದಾಚೆ ನಡೆದಿದ್ದವು. 2009ರಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದರಿಂದ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿ ನಡೆದಿತ್ತು. ಇನ್ನು 2014ರ ಚುನಾವಣೆ ವೇಳೆಯೂ ಕೆಲವು ಪಂದ್ಯಗಳು ದುಬೈನಲ್ಲಿ ನಡೆದಿದ್ದವು.