ಹೈದರಾಬಾದ್: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಇಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲ 8 ಫ್ರಾಂಚೈಸಿಗಳು ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿ ಮಾಡಲಿವೆ.
ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಆಲ್ರೌಂಡರ್ ಕೇದಾರ್ ಜಾಧವ್, ನಂ.1 ಟಿ-20 ಬ್ಯಾಟ್ಸ್‌ಮನ್ ಡೇವಿಡ್ ಮಲನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿ ಒಟ್ಟು 292 ಆಟಗಾರರು ಈ ಬಾರಿಯ ಹರಾಜು ಪಟ್ಟಿಯಲ್ಲಿದ್ದಾರೆ. 164 ಭಾರತೀಯರು, 128 ವಿದೇಶದವರು ಸೇರಿ 10 ದೇಶಗಳ ಆಟಗಾರರು ಕಣದಲ್ಲಿದ್ದಾರೆ. ಇದರಲ್ಲಿ 18 ಮಂದಿ ಆಟಗಾರರು 35 ವರ್ಷಕ್ಕಿಂತಲೂ ಮೇಲ್ಪಟ್ಟವರು ಎಂಬುದು ವಿಶೇಷ.
- ಭಾರತದ ಪ್ರಮುಖ ಆಟಗಾರರು: ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಮೊಹಮ್ಮದ್ ಅಜರುದ್ದೀನ್, ವಿಷ್ಣು ಸೋಳಂಕಿ, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಜೆ. ಸುಚಿತ್, ಉಮೇಶ್ ಯಾದವ್, ಪಿಯೂಷ್ ಚಾವ್ಲಾ, ಅರುಣ್ ಕಾರ್ತಿಕ್, ಕುಲದೀಪ್ ಯಾದವ್, ವಿಷ್ಣು ವಿನೋದ್, ಶಿವಂ ದುಬೆ, ಪವನ್ ನೇಗಿ, ಬಾಬಾ ಅಪರಾಜಿತ್, ಅರ್ಜುನ್ ತೆಂಡೂಲ್ಕರ್, ರಿಷಿ ಧವನ್, ಕುಲವಂತ್ ಖೆಜ್ರೋಲಿಯಾ, ಶಾರೂಕ್ ಖಾನ್.
- ಪ್ರಮುಖ ವಿದೇಶಿ ಆಟಗಾರರು: ಜೇಸನ್ ರಾಯ್ (ಇಂಗ್ಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್), ಡೇವಿಡ್ ಮಲನ್ (ಇಂಗ್ಲೆಂಡ್), ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್), ಮುಸ್ತಫಿಜರ್ ರೆಹಮಾನ್ (ಬಾಂಗ್ಲಾ), ಟಿಮ್ ಸೌಥಿ (ನ್ಯೂಜಿಲೆಂಡ್), ಮಾರ್ಕ್ ವುಡ್ (ಇಂಗ್ಲೆಂಡ್), ಅಲ್ಜರಿ ಜೋಸೆಫ್ (ವೆಸ್ಟ್ ಇಂಡೀಸ್), ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ), ಶಕೀಬ್ ಅಲ್ ಹಸನ್ (ಬಾಂಗ್ಲಾ), ಮೋಯಿನ್ ಅಲಿ (ಇಂಗ್ಲೆಂಡ್), ಕೈಲ್ ಜೆಮೀಸನ್ (ನ್ಯೂಜಿಲೆಂಡ್), ಡರೆನ್ ಬ್ರಾವೊ (ವಿಂಡೀಸ್), ಅಲೆಕ್ಸ್ ಹೇಲ್ಸ್(ಇಂಗ್ಲೆಂಡ್), ಶಾನ್ ಮಾರ್ಷ್ (ಆಸ್ಟ್ರೇಲಿಯಾ).
ಇದನ್ನೂ ಓದಿ: ನಾಳೆ ಐಪಿಎಲ್ ಹರಾಜು: ಈ ಹಿಂದೆ ಭಾರೀ ಮೊತ್ತಕ್ಕೆ ಬಿಕರಿಯಾದ 10 ಆಟಗಾರರು ಇವರು!
- ಸ್ಪರ್ಧೆಯಲ್ಲಿರುವ ಹಿರಿಯ ಆಟಗಾರರು: ಹರ್ಭಜನ್ ಸಿಂಗ್ (40 ವರ್ಷ), ಅರುಣ್ ಕಾರ್ತಿಕ್ (35 ವರ್ಷ), ಪ್ರದೀಪ್ ಸಾಹು (35 ವರ್ಷ), ಅಕ್ಷಯ್ ವಖೇದೆ (35 ವರ್ಷ), ಜಾನ್ ರಾಸ್ ಜಗೇಸರ್ (35 ವರ್ಷ), ನೀಲ್ ವಾಗ್ನರ್ (35 ವರ್ಷ), ಮೊಹಮದುಲ್ಲಾ (35 ವರ್ಷ), ರವಿ ಬೋಪಾರ (35 ವರ್ಷ), ಡೇವಿಡ್ ವೀಸ್ (35 ವರ್ಷ), ಲಿಯಾಮ್ ಪ್ಲಂಕೆಟ್ (36 ವರ್ಷ), ಸ್ಟುವರ್ಟ್ ಬಿನ್ನಿ (36 ವರ್ಷ), ಕೇದಾರ್ ಜಾಧವ್ (36 ವರ್ಷ), ಮೊರ್ನೆ ಮೋರ್ಕೆಲ್ (36 ವರ್ಷ), ಅನುಸಪ್ತ್ ಮಜುಂದಾರ್ (36 ವರ್ಷ), ಶಾನ್ ಮಾರ್ಷ್ (37 ವರ್ಷ), ಡೇನಿಯಲ್ ಕ್ರಿಶ್ಚಿಯನ್ (37 ವರ್ಷ), ಫಿಡೆಲ್ ಎಡ್ವರ್ಡ್ಸ್ (39 ವರ್ಷ), ನಯನ್ ದೋಶಿ (42 ವರ್ಷ)
ಫ್ರಾಂಚೈಸಿಗಳ ಬಳಿ ಇರುವ ಹಣ ಹಾಗೂ ಪಡೆಯಬಹುದಾದ ಆಟಗಾರರ ಸಂಖ್ಯೆ:
- ಬೆಂಗಳೂರು: 35.40 ಕೋಟಿ, ಆಟಗಾರರು 11
- ಚೆನ್ನೈ: 19.90 ಕೋಟಿ, ಆಟಗಾರರು 6
- ಡೆಲ್ಲಿ: 13.40 ಕೋಟಿ, ಆಟಗಾರರು 8
- ಪಂಜಾಬ್: 53.20 ಕೋಟಿ, ಆಟಗಾರರು 9
- ಕೋಲ್ಕತ್ತಾ: 10.75 ಕೋಟಿ, ಆಟಗಾರರು 8
- ಮುಂಬೈ:15.35 ಕೋಟಿ, ಆಟಗಾರರು 7
- ರಾಜಸ್ಥಾನ: 37.65 ಕೋಟಿ, ಆಟಗಾರರು 9
- ಹೈದರಾಬಾದ್: 10.75 ಕೋಟಿ, ಆಟಗಾರರು 3
ಇದನ್ನೂ ಓದಿ: IPL ಮಿನಿ ಹರಾಜು.. ಮ್ಯಾಕ್ಸ್ವೆಲ್ಗಾಗಿ ಆರ್ಸಿಬಿ, ಸಿಎಸ್ಕೆ ಪೈಪೋಟಿ.. ಮಲನ್-ಮೋಯಿನ್ ಮೇಲೆ ಎಲ್ಲರ ಕಣ್ಣು..