ETV Bharat / sports

IPL 2021: ಮುಂಬೈ ಇಂಡಿಯನ್ಸ್​ ಸೇರಿಕೊಂಡ ರೋಹಿತ್ ಶರ್ಮಾ - ಸೂರ್ಯಕುಮಾರ್ ಯಾದವ್​

ಮುಂಬೈ ಇಂಡಿಯನ್ಸ್​ನ ಅಧಿಕೃತ ಟ್ವಿಟರ್​ ರೋಹಿತ್​ ಮುಂಬೈಗೆ ಬಂದಿಳಿದ ವಿಡಿಯೋ ಶೇರ್​ ಮಾಡಿಕೊಂಡಿದೆ. ರೋಹಿತ್​ಗೂ ಮೊದಲು ಪಾಂಡ್ಯ ಬ್ರದರ್ಸ್​ ಮತ್ತು ಸೂರ್ಯಕುಮಾರ್ ಯಾದವ್​ ತಂಡ ಸೇರಿಕೊಂಡಿದ್ದರು.

: ಮುಂಬೈ ಇಂಡಿಯನ್ಸ್​ ಸೇರಿಕೊಂಡ ರೋಹಿತ್ ಶರ್ಮಾ

author img

By

Published : Mar 29, 2021, 10:47 PM IST

ಮುಂಬೈ: ಮುಂಬೈಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್​ ವಿರುದ್ಧ ಕೊನೆಯ ಏಕದಿನ ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ತಂಡ ತಂಗಿರುವ ಹೋಟೆಲ್ ಸೇರಿಕೊಂಡರು.

ಭಾರತ ತಂಡ ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ 2-1ರಲ್ಲಿ ಸರಣಿ ಜಯಿಸಿತ್ತು. ಮೂರು ಮಾದರಿಯ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ರೋಹಿತ್​ ಐಪಿಎಲ್​ನಲ್ಲಿ ಮುಂದುವರಿಸಿ ಮತ್ತೊಂದು ಟ್ರೋಫಿ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್​ನ ಅಧಿಕೃತ ಟ್ವಿಟರ್​ ರೋಹಿತ್​ ಮುಂಬೈಗೆ ಬಂದಿಳಿದ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ರೋಹಿತ್​ಗೂ ಮೊದಲು ಪಾಂಡ್ಯ ಬ್ರದರ್ಸ್​ ಮತ್ತು ಸೂರ್ಯಕುಮಾರ್ ಯಾದವ್​ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು.

ಏಪ್ರಿಲ್ 9ರಂದು 14ನೇ ಆವೃತ್ತಿಯ ಐಪಿಎಲ್​ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಚೆನ್ನೈ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಎದುರಿಸಲಿದೆ. ಕೋವಿಡ್ 19 ಕಾರಣ ಈ ಬಾರಿ 5 ಪ್ರಮುಖ ನಗರಗಳಲ್ಲಿ ಐಪಿಎಲ್​ ಪಂದ್ಯಗಳು ನಡೆಯಲಿವೆ. ಯಾವುದೇ ತಂಡಗಳಿಗೂ ಈ ಬಾರಿ ತವರಿನ ಲಾಭ ಇರುವುದಿಲ್ಲ. ಜೊತೆಗೆ ಈ ಬಾರಿ ಪ್ರೇಕ್ಷಕರಿಲ್ಲದೆ ಐಪಿಎಲ್ ಜರುಗಲಿದೆ.

ಇದನ್ನೂ ಓದಿ: ಧೋನಿಗೆ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಕಲೆ ತಿಳಿದಿದೆ: ಕೆ.ಗೌತಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.