ಮುಂಬೈ : ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ವಾರಂಟೈನ್ ಮುಗಿಸಿದ್ದು, ಮುಂಬರುವ ಐಪಿಎಲ್ಗಾಗಿ ಶನಿವಾರ ಕೋಲ್ಕತಾ ನೈಟ್ ರೈಡರ್ಸ್ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ.
ಹರ್ಭಜನ್ 2020ರ ಆವೃತ್ತಿಯನ್ನು ವೈಯಕ್ತಿಕ ಕಾರಣಗಳಿಂದ ತಪ್ಪಿಸಿದ್ದರು. ನಂತರ ಸಿಎಸ್ಕೆ ಫ್ರಾಂಚೈಸಿ ಭಜ್ಜಿಯನ್ನು 2021ರ ಐಪಿಎಲ್ ಹರಾಜಿನ ವೇಳೆ ತಂಡದಿಂದ ಕೈಬಿಟ್ಟಿತ್ತು. ಹರಾಜಿನಲ್ಲಿ ಕೆಕೆಆರ್ 2 ಕೋಟಿ ರೂ. ಮೂಲ ಬೆಲೆಗೆ ಭಾರತದ ಲೆಜೆಂಡರಿ ಸ್ಪಿನ್ನರ್ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
-
Started from this ⏩ now we're here! 🤩@Bazmccullum @harbhajan_singh #KKRHaiTaiyaar #IPL2021 pic.twitter.com/lRuEZcqhD2
— KolkataKnightRiders (@KKRiders) April 3, 2021 " class="align-text-top noRightClick twitterSection" data="
">Started from this ⏩ now we're here! 🤩@Bazmccullum @harbhajan_singh #KKRHaiTaiyaar #IPL2021 pic.twitter.com/lRuEZcqhD2
— KolkataKnightRiders (@KKRiders) April 3, 2021Started from this ⏩ now we're here! 🤩@Bazmccullum @harbhajan_singh #KKRHaiTaiyaar #IPL2021 pic.twitter.com/lRuEZcqhD2
— KolkataKnightRiders (@KKRiders) April 3, 2021
ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮಾರ್ಚ್ 27ರಂದು ಮುಂಬೈನ ಹೋಟೆಲ್ನಲ್ಲಿ ಐಪಿಎಲ್ ಪ್ರೋಟೋಕಾಲ್ನಂತೆ ಖಡ್ಡಾಯ 7 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದರು. ಇಂದಿಗೆ ಅದು ಅಂತ್ಯವಾಗಿದೆ. ಅವರು ಕ್ವಾರಂಟೈನ್ ರೂಮಿನಿಂದ ಹೊರ ಬರುವ ವಿಡಿಯೋವನ್ನು ಕೆಕೆಆರ್ ಶೇರ್ ಮಾಡಿಕೊಂಡಿದೆ.
- " class="align-text-top noRightClick twitterSection" data="
">
ಹರ್ಭಜನ್ ಸಿಂಗ್ ಕೊನೆಗೂ ಹೊರ ಬಂದಿದ್ದಾರೆ ಎಂದು ಕೆಕೆಆರ್ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದೆ. "ನಾನು ಹೊರಗಿದ್ದೇನೆ, ಯಾಕೆಂದರೆ ನನ್ನ ಫಲಿತಾಂಶಗಳು ಹೊರ ಬಂದಿವೆ. ನಾನು ಅಭ್ಯಾಸಕ್ಕೆ ಹೋಗಬೇಕಾಗಿದೆ" ಎಂದು ಭಜ್ಜಿ ವಿಡಿಯೋದಲ್ಲಿ ಹೇಳಿದ್ದಾರೆ.
ಐಪಿಎಲ್ನಲ್ಲಿ ಅಪಾರ ಅನುಭವ ಹೊಂದಿರುವ ಹರ್ಭಜನ್ ಸಿಂಗ್ 12 ಆವೃತ್ತಿಗಳಲ್ಲಿ 160 ಪಂದ್ಯಗಳನ್ನಾಡಿದ್ದು, 150 ವಿಕೆಟ್ ಪಡೆದಿದ್ದಾರೆ.