ನವದೆಹಲಿ : ವಾಂಖಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೆ ಇನ್ನು 7 ದಿನಗಳಿವೆ. ಆದರೆ, ಆಲ್ರೌಂಡರ್ ಅಕ್ಷರ್ ಪಟೇಲ್ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ಡೆಲ್ಲಿ ತಂಡಕ್ಕೆ ಆಘಾತ ತಂದಿದೆ.
ದುರಾದೃಷ್ಟವಶಾತ್ ಅಕ್ಷರ್ ಪಟೇಲ್ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅವರು ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸುತ್ತಿದ್ದು, ಐಸೋಲೇಟ್ ಆಗಿದ್ದಾರೆ ಎಂದು ಡಿಸಿ ಅಧಿಕಾರಿಯೊಬ್ಬರು ಎಎನ್ಐಗೆ ಸ್ಪಷ್ಟಪಡಿಸಿದ್ದಾರೆ.
-
IPL 2021: Big blow for DC as Axar Patel tests positive for COVID-19
— ANI Digital (@ani_digital) April 3, 2021 " class="align-text-top noRightClick twitterSection" data="
Read @ANI Story | https://t.co/SLg4MTcZBt pic.twitter.com/Y1y8U426W3
">IPL 2021: Big blow for DC as Axar Patel tests positive for COVID-19
— ANI Digital (@ani_digital) April 3, 2021
Read @ANI Story | https://t.co/SLg4MTcZBt pic.twitter.com/Y1y8U426W3IPL 2021: Big blow for DC as Axar Patel tests positive for COVID-19
— ANI Digital (@ani_digital) April 3, 2021
Read @ANI Story | https://t.co/SLg4MTcZBt pic.twitter.com/Y1y8U426W3
ಅಕ್ಷರ್ಗೂ ಮೊದಲು ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣಾಗೂ ಮಾರ್ಚ್ 22ರಂದು ಕೋವಿಡ್-19 ಸೋಂಕು ತಗುಲಿತ್ತು. ಐಸೋಲೇಸನ್ ನಂತರ ಗುರವಾರ ನಡೆಸಿದ ಮತ್ತೊಂದು ಟೆಸ್ಟ್ನಲ್ಲಿ ನೆಗೆಟಿವ್ ಪಡೆದಿದ್ದರು.
ಇದನ್ನು ಓದಿ: ವಾಂಖೆಡೆ ಸ್ಟೇಡಿಯಂನ ಮೈದಾನ ಸಿಬ್ಬಂದಿಗೆ ಕೊರೊನಾ.. ಮುಂದಿನ ಪಂದ್ಯಗಳ ಗತಿ ಏನು..?
ಬಿಸಿಸಿಐ ಎಸ್ಒಪಿ ಪ್ರಕಾರ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದವರು, ಮಾದರಿ ತೆಗೆದುಕೊಂಡ ದಿನದಿಂದ 10 ದಿನಗಳ ಕಾಲ ಬಯೋಸೆಕ್ಯೂರ್ ಹೊರಗೆ 10 ದಿನಗಳ ಐಸೋಲೇಟ್ ಆಗಬೇಕಾಗಿದೆ.
ಈ ಅವಧಿಯಲ್ಲಿ ಯಾವುದೇ ಚಟುವಟಿಕೆಗೊಳಗಾಗದೆ ವಿಶ್ರಾಂತಿಯಲ್ಲಿರಬೇಕಾಗುತ್ತದೆ. ತಂಡದ ವೈದ್ಯರು ಸೋಂಕಿತನನ್ನು ನಿರಂತರ ವೀಕ್ಷಣೆ ಮಾಡುತ್ತಿರಬೇಕು. ಒಂದು ವೇಳೆ ಸೋಂಕಿತ ಸ್ಥಿತಿ ಗಂಭೀರ ಎನಿಸಿದರೆ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಗಿದೆ.
ಈಗಾಗಲೇ ಮುಂಬೈನ ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ಕೊರೊನಾ ಬಂದಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಅಲ್ಲದೆ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಇದು ಐಪಿಎಲ್ ಫ್ರಾಂಚೈಸಿಗಳಿಗೆ ಚಿಂತೆಗೀಡು ಮಾಡಿದೆ.