ETV Bharat / sports

ವ್ಯರ್ಥವಾದ ಪೂರನ್​ ಅರ್ಧಶತಕ: ಹೈದರಾಬಾದ್​ಗೆ 69 ರನ್​ಗಳ ಭರ್ಜರಿ ಜಯ

ದುಬೈನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಜಾನಿ ಬೈರ್ಸ್ಟೋವ್​ ಅವರ 97(55 ಎಸೆತ) ಹಾಗೂ ಡೇವಿಡ್ ವಾರ್ನರ್​ 52(40) ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 201 ರನ್​ಗಳಿಸಿತ್ತು.

author img

By

Published : Oct 8, 2020, 11:47 PM IST

ಹೈದರಾಬಾದ್​ಗೆ 69 ರನ್​ಗಳ ಭರ್ಜರಿ ಜಯ
ಹೈದರಾಬಾದ್​ಗೆ 69 ರನ್​ಗಳ ಭರ್ಜರಿ ಜಯ

ದುಬೈ: ನಾಯಕ ಡೇವಿಡ್​ ವಾರ್ನರ್ ಮತ್ತು ಬೈರ್ಸ್ಟೋವ್​ ಅರ್ಧಶತಕ ಹಾಗೂ ಬೌಲರ್​ಗಳ ಉತ್ತಮ ಪ್ರದರ್ಶನದಿಂದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ 69 ರನ್​ಗಳ ಜಯ ಸಾಧಿಸಿದೆ.

ದುಬೈನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಜಾನಿ ಬೈರ್ಸ್ಟೋವ್​ ಅವರ 97(55 ಎಸೆತ) ಹಾಗೂ ಡೇವಿಡ್ ವಾರ್ನರ್​ 52(40) ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 201 ರನ್​ಗಳಿಸಿತ್ತು.

202 ರನ್​ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ಬ್ಯಾಟಿಂ್ ವೈಫಲ್ಯ ಅನುಭವಿಸಿ 16.5 ಓವರ್​ಗಳಲ್ಲಿ ಆಲೌಟ್ ಆಯಿತು. ಈ ಮೂಲಕ 69 ರನ್​ಗಳ ಹೀನಾಯ ಸೋಲುಕಂಡಿತು. ವೆಸ್ಟ್ ಇಂಡೀಸ್​ನ ಯುವ ಬ್ಯಾಟ್ಸ್​ಮನ್​ ನಿಕೋಲಸ್ ಪೂರನ್​ 37 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ 6 ಬೌಂಡರಿ ಸಹಿತ 77 ರನ್​ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.

ಪೂರನ್ ಹೊರೆತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ವಿಫಲವಾದದ್ದೆ ತಂಡದ ಸೋಲಿಗೆ ಕಾರಣವಾಯಿತು. ರಾಹುಲ್​ 11, ಮಯಾಂಕ್​ 9, ಮ್ಯಾಕ್ಸ್​ವೆಲ್​ 7, ಮಂದೀಪ್ 5, ಮುಜೀಬ್ 1, ಕಾಟ್ರೆಲ್ 0, ಶಮಿ 0 ಹಾಗೂ ಅರ್ಷ್​ದೀಪ್​ 0ಗೆ ವಿಕೆಟ್​ ಒಪ್ಪಿಸಿದರು.

ಪಂಜಾಬ್ ಹೈದರಾಬಾದ್ ಪರ ರಶೀದ್ ಖಾನ್​ 12ಕ್ಕೆ 3, ಟಿ ನಟರಾಜನ್​ 24ಕ್ಕೆ 2, ಕೆ.ಖಲೀಲ್​ ಅಹ್ಮದ್​ 24ಕ್ಕೆ 2 ಹಾಗೂ ಅಭಿಷೇಕ್ ಶರ್ಮಾ 1 ವಿಕೆಟ್​ ಪಡೆದರು ಹೈದರಾಬಾದ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.