ನವದೆಹಲಿ: ವಿವಾದಿತ ಮಂಕಡ್ ರನ್ಔಟ್ ಮಾಡದಿರುವಂತೆ ಅಶ್ವಿನ್ ಜೊತೆ ಚರ್ಚಿಸುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ ಕೋಚ್ ರಿಕಿ ಪಾಂಟಿಂಗ್ ಬುಧವಾರ ಹೇಳಿದ್ದಾರೆ.
ಆದರೆ, ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಡಿರುವ ಎಡಗೈ ಸ್ಪಿನ್ನರ್ ಬ್ರಾಡ್ ಹಾಗ್ ಮಂಕಡ್ ವಿಚಾರದಲ್ಲಿ ಭಾರತದ ಬೌಲರ್ ಅಶ್ವಿನ್ ಪರ ನಿಂತಿದ್ದಾರೆ.
ಮಂಕಡ್ ಮಾಡುವುದು ಕ್ರೀಡಾ ಸ್ಫೂರ್ತಿಗೆ ದಕ್ಕೆ ತರುವುದಾದರೆ, ಬೌಲರ್ ಚೆಂಡನ್ನು ಎಸೆಯುವ ಮೊದಲೇ ನಾನ್ ಸ್ಟ್ರೈಕರ್ನಲ್ಲಿರುವ ಬ್ಯಾಟ್ಸ್ಮನ್ ಕ್ರೀಸ್ ಬಿಟ್ಟು ಹೋಗಿ ಅನುಕೂಲತೆ ಪಡೆಯುವುದು ಕ್ರೀಡಾ ಸ್ಪೂರ್ತಿಗೆ ದಕ್ಕೆ ಮಾಡಿದಂತಾಗುವುದಿಲ್ಲವೆ? ಎಂದು ಹಾಗ್ ತಮ್ಮ ಟ್ವಿಟರ್ನಲ್ಲಿ ಬರೆದು ಕೊಂಡಿದ್ದಾರೆ.
-
Batsman leaving the crease before the ball is delivered, when they know they're getting an advantage, is that in the spirit of the game!#cricket #IPL2020 https://t.co/seSB4fv89z
— Brad Hogg (@Brad_Hogg) August 20, 2020 " class="align-text-top noRightClick twitterSection" data="
">Batsman leaving the crease before the ball is delivered, when they know they're getting an advantage, is that in the spirit of the game!#cricket #IPL2020 https://t.co/seSB4fv89z
— Brad Hogg (@Brad_Hogg) August 20, 2020Batsman leaving the crease before the ball is delivered, when they know they're getting an advantage, is that in the spirit of the game!#cricket #IPL2020 https://t.co/seSB4fv89z
— Brad Hogg (@Brad_Hogg) August 20, 2020
ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ , ಮಂಕಡ್ ಮಾಡುವುದು ಕ್ರಿಕೆಟ್ ಭಾಗವಲ್ಲ, ನಾನು ಅಶ್ವಿನ್ ಜೊತೆ ಈ ಸೀಸನ್ನಲ್ಲಿ ಮಂಕಡ್ ಮಾಡದಿರುವಂತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದರು.
ರಿಕಿ ಪಾಂಟಿಂಗ್ ಈ ರೀತಿ ಹೇಳುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಅಶ್ವಿನ್ ಪರ ನಿಂತಿದ್ದು, ಕ್ರೀಡಾ ಸ್ಪೂರ್ತಿಯ ಬಗ್ಗೆ ರಿಕಿ ಪಾಂಟಿಂಗ್ ಅಶ್ವಿನ್ಗೆ ಪಾಠ ಮಾಡುವುದು ಹಾಸ್ಯಾಸ್ಪದ ಎಂದು ಟ್ವಿಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಸ್ವತಃ ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಹಾಗ್ ಕೂಡ ಅಶ್ವಿನ್ ಪರ ನಿಂತಿದ್ದು, ಈ ಚರ್ಚೆ ಮುಂದೆ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ಕಾದು ನೋಡಬೇಕಿದೆ.